Belagavi News In Kannada | News Belgaum

ಮೋದಿ ನಮ್ಮ ಹೀರೋ ಮೋದಿ ನಮ್ಮ ದೇವರು

ಬೆಳಗಾವಿ : ಮೋದಿ ನಮ್ಮ ಹೀರೋ ಮೋದಿ ನಮ್ಮ ದೇವರು
ಮೋದಿ ಹೆಸರು ಹೇಳಿಕೊಂಡು ಬಂದು ಬಿಜೆಪಿ ಬೆಳಗಾವಿಯ ದಿಕ್ಕು ತಪ್ಪಿಸಿ ಸ್ಥಳೀಯರ ಅವಕಾಶ ಕಿತ್ತುಕೊಂಡ ಸಮಯ ಸಾಧಕ ಬಿಜೆಪಿಯ ಅಭ್ಯರ್ಥಿ ಎಂಬುದನ್ನು ನಾವು ಒಪ್ಪೋಲ್ಲ.

ಸೈದ್ಧಾಂತಿಕವಾಗಿ ಹಿಂದುತ್ವ ಹಾಗೂ ಬಿಜೆಪಿಯಿಂದ ನಾನು ಭಿನ್ನವಲ್ಲ, ಸಣ್ಣ ಅವಕಾಶಕ್ಕಾಗಿ ವರ್ಷದಲ್ಲೇ ಪಕ್ಷ ಬಿಟ್ಟು ಪಕ್ಷಕ್ಕೆ ಹೋಗಿ, ಮೋದಿಯವರನ್ನೇ ನಿಂದಿಸಿ ಈಗ ಮೋದಿಯವರ ಹೆಸರಲ್ಲಿ ವೋಟ ಕೇಳಲು ಬಂದ ಈ ಅಭ್ಯರ್ಥಿಯನ್ನು ನಮ್ಮ ಸ್ವಾಭಿಮಾನ ಹಾಗೂ ಆತ್ಮ ಸಾಕ್ಷಿ ಎರಡೂ ಅರಗಿಸಿಕೊಳ್ಳಲು ಸಾಧ್ಯವಿಲ್ಲ.

70 ವರ್ಷ ಈ ದೇಶವನ್ನು ಕೊಳ್ಳೆ ಹೊಡೆದು, ಕಾರ್ಯಕರ್ತರಿಗೆ ಅವಕಾಶ ಕೊಡದೆ ಕುಟುಂಬ ರಾಜಕಾರಣ ಮಾಡುತ್ತ ಈಗ ಲೋಕಸಭೆ ಪ್ರವೇಶದ ಹಗಲುಗನಸು ಕಾಣುತ್ತಿರುವ ಕಾಂಗ್ರೆಸ್ಸಿಗರು ದೇಶದಾದ್ಯಂತ ಮಣ್ಣು ಮುಕ್ಕುವುದರಲ್ಲಿ ಅನುಮಾನವಿಲ್ಲ.

ಯುವಕ, ಮನೆ ಮಗ , ಮೋದಿಯವರ ಜೊತೆ ಹೆಜ್ಜೆ ಹಾಕುವ, ಹಿಂದುತ್ವದ ಹಾಗೂ ರಾಷ್ಟ್ರೀಯ ವಿಚಾರಧಾರೆಯ ವ್ಯಕ್ತಿ ಬೆಳಗಾವಿಯ ಲೋಕಸಭೆಯ ಸದಸ್ಯನಾಗಬೇಕು ಎಂಬ ನಮ್ಮ ಜನರ ಅಭಿಪ್ರಾಯ ಇಂದಿನ Republic Kannada ನಡೆಸಿದ ಕುರುಕ್ಷೇತ್ರ ರಣ ಕಣ ಕಾರ್ಯಕ್ರಮದಲ್ಲಿ ವ್ಯಕ್ತವಾಗಿದ್ದು ಸತ್ಯ, ಈ ಎಲ್ಲ ಸಮೀಕರಣದಲ್ಲಿ ಒಂದು ಕಡೆ ಬೆಳಗಾವಿಗರ ಸ್ವಾಭಿಮಾನ ರಾರಾಜಿಸಿ ಮೋದಿಯವರ ಗೆಲುವಿನ ಸೂಚನೆ ನೀಡಿದರೆ ಇನ್ನೊಂದೆಡೆ ಬೆಳಗಾವಿಯಲ್ಲಿ ಆ ಗೆಲುವು ಸ್ವಾಭಿಮಾನಿಯಿಂದಲೇ ಸಾಧ್ಯ ಎಂಬುದನ್ನು ಸ್ಪಷ್ಟವಾಗಿ ಬಿಂಬಿಸಿದೆ.