Belagavi News In Kannada | News Belgaum

ನರೇಗಾ ಕಾಮಗಾರಿ ಸ್ಥಳದಲ್ಲಿ ಮತದಾನ ಜಾಗೃತಿ.ಚುನಾವಣೆಗಳೇ ಉತ್ತಮರ ಆಯ್ಕೆಯ ಹೆದ್ದಾರಿ..

ಚಿಕ್ಕೋಡಿ(ಎ5) : ಚಿಕ್ಕೋಡಿ ತಾಲೂಕಿನ ವಡ್ರಾಳ ಗ್ರಾಮ ಪಂಚಾಯತಯಲ್ಲಿ ಪ್ರಗತಿಯಲ್ಲಿರುವ ನರೇಗಾ ಕಾಮಗಾರಿ ಸ್ಥಳದಲ್ಲಿ ಹಾಜರಿದ್ದ ಕೂಲಿಕಾರರಿಗೆ ಸಾರ್ವತ್ರಿಕ ಲೋಕ ಸಭಾ ಚುನಾವಣೆ-2024ರ ಅಂಗವಾಗಿ ಮತದಾನ ಜಾಗೃತಿ ಮಾಡಲಾಯಿತು.
ಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿದ ತಾಲೂಕ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ 18 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರು ಮತದಾನವನ್ನು ಮಾಡಲೇಬೇಕು ಆದ್ದರಿಂದ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ನಿರ್ಭೀತರಾಗಿ ಮತದಾನ ಮಾಡುವ ಮೂಲಕ ಜಿಲ್ಲೆಯಲ್ಲಿ ಈ ಬಾರಿ ಪ್ರತಿಶತ 100% ರಷ್ಟು ಮತದಾನ ಮಾಡಿಸುವುದು ನಮ್ಮ- ನಿಮ್ಮೆಲ್ಲರ ಗುರಿ ಆಗಿದೆ ಎಂದು ಹೇಳಿದರು. ಮೇ 7ನೇ ತಾರೀಖಿನಂದು ನಮ್ಮ ಭಾಗದಲ್ಲಿ ನಡೆಯುವ ಲೋಕಸಭೆ ಚುನಾವಣೆಯ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಿ ಉತ್ತಮರನ್ನು ಆಯ್ಕೆ ಮಾಡೋಣ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿಗಳು, ನರೇಗಾ ಕೂಲಿಕಾರ್ಮಿಕರು ಉಪಸ್ಥಿತರಿದ್ದರು.