Belagavi News In Kannada | News Belgaum

ಅಮಾವಾಸ್ಯೆಯ ಅನುಭಾವ ಗೋಷ್ಠಿ *

 

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಜಿಲ್ಲಾಘಟಕ ಅಮವಾಸ್ಯೆಯ ಅನುಭಾವಗೋಷ್ಠಿ ಸೋಮವಾರ ದಿನಾಂಕ 08-04-2024 ರಂದು ಸಾಯಂಕಾಲ 5.00 ಗಂಟೆಗೆ, ಲಿಂಗಾಯತ ಭವನ, ಶಿವಬಸವ ನಗರ ಬೆಳಗಾವಿಯಲ್ಲಿ ಜರುಗುವುದು.

ಶ್ರೀ ಮ.ನಿ.ಪ್ರ.ಪೂಜ್ಯ ಗುರುಸಿದ್ಧ ಮಹಾಸ್ವಾಮಿಗಳು, ಕಾರಂಜಿಮಠ, ಬೆಳಗಾವಿ ಇವರು ಸಾನಿಧ್ಯ ವಹಿಸುವರು. ಶರಣ ಡಾ.ರಾಜಶೇಖರ್‌ ಬಿರಾದಾರ್ ಕನ್ನಡ ಪ್ರಾಧ್ಯಾಪಕರು ಸರಕಾರಿ ಪ್ರಥಮ ದಜೆ೯ ಕಾಲೇಜು ಯರಗಟ್ಟಿ. ಇವರು “ಅಕ್ಕ ಮಹಾದೇವಿ ಶ್ರೇಷ್ಠ ಸಬಲ ಮಹಿಳೆ”. ಎಂಬ ವಿಷಯದ ಮೇಲೆ ಅನುಭಾವ ನೀಡಲಿದ್ದಾರೆ. ಜಿಲ್ಲಾಧ್ಯಕ್ಷರಾದ ಶ್ರೀಮತಿ ರತ್ನಪ್ರಭಾ ಬೆಲ್ಲದ ಇವರು ಅಧ್ಯಕ್ಷತೆ ವಹಿಸುವರು. ಹಾಗೂ ಲಿಂಗಾಯತ ಮಹಿಳಾ ಸಮಾಜವತಿಯಿಂದ ದಾಸೋಹ ಸೇವೆಸಲ್ಲಿಸುವರು.

ಕಾರಣ ಎಲ್ಲ ಬಸವಾಭಿಮಾನಿಗಳು ಸಮಯಕ್ಕೆ ಸರಿಯಾಗಿ ಆಗಮಿಸಿ ಅಮವಾಸ್ಯೆಯ ಅನುಭಾವಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಪ್ರಧಾನ ಕಾರ್ಯದರ್ಶಿಗಳು ವಿನಂತಿಕೊಂಡಿದ್ದಾರೆ.