Belagavi News In Kannada | News Belgaum

ಜೈಪುರ್ : ರಾಜಸ್ಥಾನದ ಜೈಪುರ್​ದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಇಂದು ರಾಜಸ್ಥಾನ ರಾಯಲ್ಸ್ ವಿರುದ್ಧ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಅಖಾಡಕ್ಕೆ ಇಳಿಯಲಿದೆ. ಇದಕ್ಕಾಗಿ ಈಗಾಗಲೇ​ ನೆಟ್ಸ್​ನಲ್ಲಿ ಉಭಯ ತಂಡಗಳ ಪ್ಲೇಯರ್ಸ್​ ಭರ್ಜರಿ ಅಭ್ಯಾಸ ನಡೆಸಿದ್ದಾರೆ. ಇದೇ ವೇಳೆ ವಿರಾಟ್​ ಕೊಹ್ಲಿ, ಮ್ಯಾಕ್ಸಿ ಪ್ರ್ಯಾಕ್ಟೀಸ್​ನಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಆರ್​ಸಿಬಿಯ ಮಾಜಿ ಪ್ಲೇಯರ್ ಯಜುವೇಂದ್ರ ಚಹಲ್​ ಜೊತೆ ಫುಲ್ ಕಾಮಿಡಿ ಮಾಡಿ ಕೆಲ ಸಮಯ ಕಳೆದಿದ್ದಾರೆ. ಆರ್​ಸಿಬಿ ಪ್ಲೇಯರ್​ ವಿರಾಟ್​ ಕೊಹ್ಲಿ ಹಾಗೂ ರಾಜಸ್ಥಾನ ರಾಯಲ್ಸ್ ಸ್ಪಿನ್ನರ್ ಯಜುವೇಂದ್ರ ಚಹಲ್ ಅಭ್ಯಾಸದ ವೇಳೆ ಕೆಲ ಸಮಯ ಕಳೆದು ಫುಲ್ ಖುಷ್ ಆಗಿದ್ದಾರೆ. ಈ ವೇಳೆ ಚಹಲ್ ಮಾಡಿದ ಕಾಮಿಡಿಗೆ ಕಿಂಗ್ ಕೊಹ್ಲಿ ಬಿದ್ದು, ಬಿದ್ದು ನಕ್ಕಿದ್ದಾರೆ. ಚಹಲ್ ಎಂದರೆ ಕ್ರಿಕೆಟ್​ ಕ್ಷೇತ್ರದಲ್ಲಿ ಎಲ್ಲರಿಗೂ ಇಷ್ಟ. ಹೀಗಾಗಿಯೇ ಕೆಲ ಆಟಗಾರರು ಚಹಲ್ ಬಳಿ ಟೈಮ್​ ಪಾಸ್ ಮಾಡಲು ಕಾತುರದಲ್ಲಿರುತ್ತಾರೆ. ಚಹಲ್​ರನ್ನ ತಬ್ಬಿಕೊಂಡ ಮಾಕ್ಸ್​ವೆಲ್​ ಯಾವುದೋ ಕಾಮಿಡಿಗೆ ಸಖತ್ ನಕ್ಕಿದ್ದಾರೆ. ಮ್ಯಾಕ್ಸ್​ವೆಲ್ ಜೊತೆಯು ಕಾಮಿಡಿ ಮಾಡಿರುವ ಚಹಲ್ ಸಹ ಆಟಗಾರರನ್ನ ಸಂತಸ ಪಡಿಸಿದ್ದಾರೆ ಎಂದು ಹೇಳಲಾಗಿದೆ. ​ ಇದೇ ವೇಳೆ ಆರ್​ಆರ್​ ಬ್ಯಾಟಿಂಗ್ ಕೋಚ್ ಕುಮಾರ್ ಸಂಗಕಾರ್ ಹಾಗೂ ಕೊಹ್ಲಿ ಇಬ್ಬರು ಕೆಲ ಸಮಯ ಬ್ಯಾಟಿಂಗ್ ಬಗ್ಗೆ ಚರ್ಚೆ ಮಾಡಿದ್ದಾರೆ. ಐಪಿಎಲ್​ನ 19ನೇ ಪಂದ್ಯವಾಡಲು ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ರಾಜಸ್ಥಾನ್​ಗೆ ತೆರಳಿದ್ದು ಅಲ್ಲಿ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಭರ್ಜರಿ ತಾಲೀಮು ನಡೆಸಿದೆ. ಪಂದ್ಯವು ಇಂದು ಸಂಜೆ 7:30ಕ್ಕೆ ನಡೆಯಲಿದೆ. ಈಗಾಗಲೇ 4 ಪಂದ್ಯಗಳನ್ನು ಆಡಿರುವ ಆರ್​ಸಿಬಿ 3ರಲ್ಲಿ ಸೋತು 1 ಅನ್ನು ಗೆದ್ದುಕೊಂಡಿದೆ. ಹೀಗಾಗಿ ಇಂದಿನ ಪಂದ್ಯ ಗೆಲ್ಲುವುದು ಆರ್​ಸಿಬಿಗೆ ಅನಿವಾರ್ಯ ಎಂದೇ ಹೇಳಬಹುದು.

ಜೈಪುರ್ : ರಾಜಸ್ಥಾನದ ಜೈಪುರ್​ದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಇಂದು ರಾಜಸ್ಥಾನ ರಾಯಲ್ಸ್ ವಿರುದ್ಧ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಅಖಾಡಕ್ಕೆ ಇಳಿಯಲಿದೆ. ಇದಕ್ಕಾಗಿ ಈಗಾಗಲೇ​ ನೆಟ್ಸ್​ನಲ್ಲಿ ಉಭಯ ತಂಡಗಳ ಪ್ಲೇಯರ್ಸ್​ ಭರ್ಜರಿ ಅಭ್ಯಾಸ ನಡೆಸಿದ್ದಾರೆ.

ಇದೇ ವೇಳೆ ವಿರಾಟ್​ ಕೊಹ್ಲಿ, ಮ್ಯಾಕ್ಸಿ ಪ್ರ್ಯಾಕ್ಟೀಸ್​ನಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಆರ್​ಸಿಬಿಯ ಮಾಜಿ ಪ್ಲೇಯರ್ ಯಜುವೇಂದ್ರ ಚಹಲ್​ ಜೊತೆ ಫುಲ್ ಕಾಮಿಡಿ ಮಾಡಿ ಕೆಲ ಸಮಯ ಕಳೆದಿದ್ದಾರೆ. ಆರ್​ಸಿಬಿ ಪ್ಲೇಯರ್​ ವಿರಾಟ್​ ಕೊಹ್ಲಿ ಹಾಗೂ ರಾಜಸ್ಥಾನ ರಾಯಲ್ಸ್ ಸ್ಪಿನ್ನರ್ ಯಜುವೇಂದ್ರ ಚಹಲ್ ಅಭ್ಯಾಸದ ವೇಳೆ ಕೆಲ ಸಮಯ ಕಳೆದು ಫುಲ್ ಖುಷ್ ಆಗಿದ್ದಾರೆ. ಈ ವೇಳೆ ಚಹಲ್ ಮಾಡಿದ ಕಾಮಿಡಿಗೆ ಕಿಂಗ್ ಕೊಹ್ಲಿ ಬಿದ್ದು, ಬಿದ್ದು ನಕ್ಕಿದ್ದಾರೆ.

ಚಹಲ್ ಎಂದರೆ ಕ್ರಿಕೆಟ್​ ಕ್ಷೇತ್ರದಲ್ಲಿ ಎಲ್ಲರಿಗೂ ಇಷ್ಟ. ಹೀಗಾಗಿಯೇ ಕೆಲ ಆಟಗಾರರು ಚಹಲ್ ಬಳಿ ಟೈಮ್​ ಪಾಸ್ ಮಾಡಲು ಕಾತುರದಲ್ಲಿರುತ್ತಾರೆ. ಚಹಲ್​ರನ್ನ ತಬ್ಬಿಕೊಂಡ ಮಾಕ್ಸ್​ವೆಲ್​ ಯಾವುದೋ ಕಾಮಿಡಿಗೆ ಸಖತ್ ನಕ್ಕಿದ್ದಾರೆ. ಮ್ಯಾಕ್ಸ್​ವೆಲ್ ಜೊತೆಯು ಕಾಮಿಡಿ ಮಾಡಿರುವ ಚಹಲ್ ಸಹ ಆಟಗಾರರನ್ನ ಸಂತಸ ಪಡಿಸಿದ್ದಾರೆ ಎಂದು ಹೇಳಲಾಗಿದೆ. ​

ಇದೇ ವೇಳೆ ಆರ್​ಆರ್​ ಬ್ಯಾಟಿಂಗ್ ಕೋಚ್ ಕುಮಾರ್ ಸಂಗಕಾರ್ ಹಾಗೂ ಕೊಹ್ಲಿ ಇಬ್ಬರು ಕೆಲ ಸಮಯ ಬ್ಯಾಟಿಂಗ್ ಬಗ್ಗೆ ಚರ್ಚೆ ಮಾಡಿದ್ದಾರೆ. ಐಪಿಎಲ್​ನ 19ನೇ ಪಂದ್ಯವಾಡಲು ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ರಾಜಸ್ಥಾನ್​ಗೆ ತೆರಳಿದ್ದು ಅಲ್ಲಿ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಭರ್ಜರಿ ತಾಲೀಮು ನಡೆಸಿದೆ.

ಪಂದ್ಯವು ಇಂದು ಸಂಜೆ 7:30ಕ್ಕೆ ನಡೆಯಲಿದೆ. ಈಗಾಗಲೇ 4 ಪಂದ್ಯಗಳನ್ನು ಆಡಿರುವ ಆರ್​ಸಿಬಿ 3ರಲ್ಲಿ ಸೋತು 1 ಅನ್ನು ಗೆದ್ದುಕೊಂಡಿದೆ. ಹೀಗಾಗಿ ಇಂದಿನ ಪಂದ್ಯ ಗೆಲ್ಲುವುದು ಆರ್​ಸಿಬಿಗೆ ಅನಿವಾರ್ಯ ಎಂದೇ ಹೇಳಬಹುದು.