Belagavi News In Kannada | News Belgaum

ಬಿಜೆಪಿ ಅಭ್ಯರ್ಥಿಯಾದ ಜಗದೀಶ್ ಶೆಟ್ಟರ್ ಅವರು ಪ್ರಮುಖರನ್ನು ಭೇಟಿ ಮಾಡಿ, ಮತಯಾಚನೆ ನಡೆಸಿದರು

ಬೆಳಗಾವಿ ;  ಲೋಕಸಭಾ ಚುನಾವಣೆ ಅಂಗಾವಗಿ ಬೆಳಗಾವಿ ಉತ್ತರ ಮತಕ್ಷೇತ್ರದ ವ್ಯಾಪ್ತಿಯ ಆಟೋ ನಗರ ಹಾಗೂ ಸದಾಶಿವನಗಳಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಜಗದೀಶ್ ಶೆಟ್ಟರ್ ಅವರು ಪ್ರಮುಖರನ್ನು ಭೇಟಿ ಮಾಡಿ, ಮತಯಾಚನೆ ನಡೆಸಿ, ದೇಶದಲ್ಲಿ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜೀ ಅವರು ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿಯ ಪರ್ವ ನಡೆದಿದ್ದು, ದೇಶದಾದ್ಯಂತ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದೀಜೀ ಅವರೇ ಮತ್ತೊಮ್ಮೆ ಪ್ರಧಾನಂತ್ರಿಗಳಾಗಬೇಕು ಎಂಬುವುದು ಜನರ ಅಪೇಕ್ಷೆ. ಈ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಶ್ರೀ ಅನಿಲ ಬೆನಕೆ, ಮಹಾಪೌರರಾದ ಶ್ರೀಮತಿ ಸವಿತಾ ಕಾಂಬ್ಳೆ, ಮಂಡಲ ಅಧ್ಯಕ್ಷರಾದ ಶ್ರೀ ವಿಜಯ ಕೊಡಗ್ನೂರ, ಪಾಲಿಕೆ ಸದಸ್ಯರಾದ ಶ್ರೀ ಹನುಮಂತ ಕೊಂಗಾಲಿ, ಶ್ರೀ ರಾಜು ದೋಣಿ, ಪ್ರಮುಖರಾದ ಶ್ರೀ ಮುರಗೇಂದ್ರ ಪಾಟೀಲ್, ಶ್ರೀ ಸುರೇಶ ಯಾದವ್, ಶ್ರೀ ಈರಯ್ಯ ಕೋತ,ಶ್ರೀ ರಿಯಾಜ್ ಬೋಗಿ, ಶ್ರೀ ಮುಕ್ತಾರ್ ಪಠಾಣ, ಶ್ರೀ ಗಜು ಮಿಸಾಳೆ, ಶ್ರೀ ದೇವರಾಜ್ ಬಸವಂತ್ ವಾಡೆ, ಶ್ರೀ ಸಂಜಯ ಭಂಡಾರಿ, ಶ್ರೀ ಗಜಾನನ್ ಮಿಸಾಳೆ, ಶ್ರೀ ಕರಣ್ ಪಾಟೀಲ್, ಶ್ರೀಮತಿ ಲೀನಾ ಟೋಪಣ್ಣವರ್ ಹಾಗೂ ಇತರರು ಉಪಸ್ಥಿತರಿದ್ದರು.