Belagavi News In Kannada | News Belgaum

ರಾಜ್ಯ ಚುನಾವಣಾ ಅಖಾಡಕ್ಕೆ ಮೋದಿ ಎಂಟ್ರಿ: ಬೃಹತ್ ರೋಡ್ ಶೋ ಆಯೋಜನೆ

ಬೆಳಗಾವಿ: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಅಖಾಡ ರಂಗೇರಿದು, ಕೆಲದಿನಗಳ ಹಿಂದೆ ಬಿಜೆಪಿ ಚಾಣಕ್ಯ ಅಮೀತ್ ಶಾ ಅವರು ರಾಜ್ಯಕ್ಕೆ ಆಗಮಿಸಿ ಸಮಾವೇಶ ಮಾಡಿದರು ಅದರ ಬೆನ್ನಲ್ಲೆ ಈ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಚುನಾವಣಾ ಅಖಾಡಕ್ಕೆ ದುಮುಕಿದ್ದಾರೆ..

ಏ.14 ಕ್ಕೆ ರಾಜ್ಯಕ್ಕೆ ಭೇಟಿ ನೀಡಲಿರುವ ಮೋದಿಯವರು ಬೃಹತ್ ರೋಡ್ ಶೋ ಹಾಗೂ ಬೃಹತ ಸಮಾವೇಶ ನಡೆಸಲಿದ್ದಾರೆ.‌ ಏ.14 ರಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಮಾವೇಶ ನಡೆಯಲಿದೆ..

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ
ದೇವನಹಳ್ಳಿಯಲ್ಲಿ ಏ.14 ಕ್ಕೆ ಸಮಾವೇಶ ನಿಗದಿಯಾಗಿತ್ತು. ಇದೀಗ ಸಮಾವೇಶ ಮಂಗಳೂರಿಗೆ ಶಿಪ್ಟ್ ಮಾಡಲಾಗಿದೆ..

 

ಏ.14 ರಂದು ಮಂಗಳೂರಿನಲ್ಲಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿದ ನಂತರ ಪ್ರಧಾನಿ ಮೋದಿ ಸಂಜೆ ಬೆಂಗಳೂರಿನ
ಹೆಬ್ಬಾಳ-ಬ್ಯಾಟರಾಯನಪುರದಲ್ಲಿ ರೋಡ್ ಶೋ ನಡೆಸಲಿದ್ದಾರೆ.‌ ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್ ಪರ ಬೃಹತ್ ಸಮಾವೇಶದ ಬಳಿಕ ಸಂಜೆ ಶೋಭಾ ಕರಂದ್ಲಾಜೆ ಕ್ಷೇತ್ರವಾದ ಬೆಂಗಳೂರು.

ಉತ್ತರದಲ್ಲಿ ರೋಡ್ ಶೋ ನಡೆಸುವುದೆಂದು ನಿರ್ಧರಿಸಲಾಗಿತ್ತು. ಆದರೆ ಈಗ ಏ. 14 ರಂದು ಮೊದಲು ಮಂಗಳೂರಿನಲ್ಲಿ ಬೃಹತ್ ಸಮಾವೇಶ ಮಾಡಿ, ಅದೆ ದಿನ ಪ್ರಧಾನಿ ನರೇಂದ್ರ ಮೋದಿಯವರ ಬೆಂಗಳೂರಿನಲ್ಲಿ ರೋಡ್​ ಶೋ ನಿಗದಿಯಂತೆಯೇ ನಡೆಯಲಿದೆ.