Belagavi News In Kannada | News Belgaum

ಪಿಯುಸಿಯಲ್ಲಿ ವಿದ್ಯಾರ್ಥಿ ರಾಹುಲ ಉತ್ತಮ ಸಾಧನೆ…

ಬೆಳಗಾವಿ:  ರಾಮದುರ್ಗ ತಾಲೂಕಿನ ಕೆ. ಚಂದರಗಿ ಕ್ರೀಡಾ ಕಾಲೇಜ್‌ ನ ವಿದ್ಯಾರ್ಥಿ ರಾಹುಲ ರಮೇಶ ಮಗದುಮ್ಮ  ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.94ರಷ್ಟು ಅಂಕ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾನೆ.

ಬೆಳಗಾವಿಯ ನಿವಾಸಿಯಾದ ರಾಹುಲ ರಮೇಶ ಮಗದುಮ್ಮ   ಪ್ರತಿಷ್ಠಿತ  ಕೆ. ಚಂದರಗಿ ಕ್ರೀಡಾ ಪಿಯು ಕಾಲೇಜ್‌ನ ವಿದ್ಯಾರ್ಥಿಯಾಗಿದ್ದು,  ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕುಮಾರ ರಾಹುಲ ಮಗದುಮ್ಮ 600 ಕ್ಕೆ 523  (ಶೇ 87.16%) ಅಂಕಗಳಸಿ ಉತ್ತೀರ್ಣರಾಗಿದ್ದಾರೆ. ತಂದೆಯವರಾದ ರಮೇಶ ಮಗದುಮ್ಮ ಅವರು ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮಗನ ಸಾಧನೆಗೆ ಪೋಷಕರು ಹಾಗೂ ಕಾಲೇಜ ಪ್ರಾಂಶುಪಾಲರು, ಉಪನ್ಯಾಸಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.