Belagavi News In Kannada | News Belgaum

ನಿಪ್ಪಾಣಿ ಕ್ಷೇತ್ರದಲ್ಲೇ ಸಾಹುಕಾರ್‌ ಸುತ್ತಾಟ: ಜೊಲ್ಲೆಗೆ ಪೀಕಲಾಟ್

ನಿಪ್ಪಾಣಿ:  ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ  ಪುತ್ರಿಯನ್ನು  ಕಣಕ್ಕಿಳಿಸಿದ  ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ  ಈಗಾಗಲೇ ಆತ್ಮೀಯ ವಲಯದಲ್ಲಿ ವ್ಯಾಪಕ ಬೆಂಬಲ  ವ್ಯಕ್ತವಾಗಿದ್ದು, ಬಿಜೆಪಿ ಭದ್ರಕೋಟೆಯಲ್ಲಿ ಕೈ ಮೆಲುಗೈ ಸಾಧಿಸಲು ಪಣ ತೊಟ್ಟಿರುವ  ಸತೀಶ್‌ ಜಾರಕಿಹೊಳಿ ಅವರು ಪ್ರಭಾವಿ ನಾಯಕರ ಮನೆ-ಮೆನೆಗೆ ಭೇಟಿ ನೀಡಿ ಸಂಚಲನ ಸೃಷ್ಟಿಸಿದ್ದಾರೆ.

ಪ್ರಚಾರ ಸಭೆ ಬಳಿಕ ಸಚಿವರು ಬುಧವಾರ ನಿಪ್ಪಾಣಿ ವ್ಯಾಪ್ತಿಯ ಹಲವು ಮುಖಂಡರ ಮನೆಗೆ ಭೇಟಿ ನೀಡಿ,  ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದರು. ಪುತ್ರಿ ಪ್ರಿಯಂಕಾ ಅವರನ್ನು ಬಹು ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಜಾರಕಿಹೊಳಿ ಕುಡಿಗಳಿಂದ ಭರ್ಜರಿ ಪ್ರಚಾರ: ಜೊಲ್ಲೆಯವರ ತವರು ಕ್ಷೇತ್ರದಲ್ಲಿ ಸುತ್ತಾಟ ನಡೆಸಿದ ಸಾಹುಕಾರ್‌ ಸತೀಶ ಅವರು  ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಸಚಿವ ಸತೀಶ್‌ ಜಾರಕಿಹೊಳಿ  ಅಭಿಮಾನ ಬಳಗ ಜತೆಗೆ ಯುವ ನಾಯಕಿ ಎಂಬ ಆತ್ಮೀಭಿಮಾನ  ಪ್ರಿಯಂಕಾ ಜಾರಕಿಹೊಳಿ ಅವರಿಗೆ ಪ್ಲಸ್‌ ಆಗಲಿದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರ ಜಾರಕಿಹೊಳಿ ಕುಡಿಗಳು ಭರ್ಜರಿ ಪ್ರಚಾರ ನಡೆಸಿದ್ದು ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಇದರಿಂದ ಕಾಂಗ್ರೆಸ್‌ ಅಭ್ಯರ್ಥಿಗೆ ಇನ್ನಷ್ಟು ಬಲ ಬಂದತಾಗಿದೆ.

ನಿಪ್ಪಾಣಿ ಪಟ್ಟಣದ ಮುಖಂಡರಾದ ರಾಕೇಶ್ ಕದಂ‌, ಅಶೋಕಕುಮಾರ ಅಸೋದೆ, ನಗರಸಭೆ ಸದಸ್ಯ ರವಿ ಶಿಂಧೆ, ಮಾಜಿ ಶಾಸಕ ಸುಭಾಷ್ ಜೋಶಿ, ಪ್ರೊ. ಅಚ್ಚುತ್ ಮಾನೆ, ಶಹಾ ಉದ್ಯಮ ಸಮೂಹದ ಅಧ್ಯಕ್ಷ ಆಶೀಶ್ ಶಹಾ ಅವರ ಮನೆಗಳಿಗೆ ಭೇಟಿ ನೀಡಿ ಕುಶಲೋಪರಿ‌ ವಿಚಾರಿಸಿ, ರಾಜಕೀಯ ಬೆಳವಣಿಗಳ ಬಗ್ಗೆಯೂ ಚರ್ಚೆ ನಡೆಸಿದ್ದು, ಈ ಭಾಗದಿಂದ ಹೆಚ್ಚಿನ ಮತಗಳು ಕೈ ಗೆ ಶಕ್ತಿ ಬರಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

 ಸಮಸ್ಯೆ ಆಲಿಸಿದ ಸಚಿವರು:  ಈಗಾಗಲೇ  ನಿಪ್ಪಾಣಿ ವ್ಯಾಪ್ತಿಯ ಪ್ರತಿ ವಾರ್ಡ್ ನ  ನಿವಾಸಿಗಳಿಗೆ ಭೇಟಿಯಾದ ಸಚಿವ ಸತೀಶ್‌ ಜಾರಕಿಹೊಳಿ ಅವರು ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಕುಡಿಯುವ ನೀರು ಸೇರಿದಂತೆ ಇತರೆ ಸಮಸ್ಯೆಗಳನ್ನು ಶೀಘ್ರದಲ್ಲೇ ಇತ್ಯರ್ಥ ಮಾಡುವುದಾಗಿ ತಿಳಿಸಿದ್ದಾರೆ.


ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ, ಬೆಳಗಾವಿ ಬೂಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ,  ಮುಖಂಡರಾದ ಉತ್ತಮ ಪಾಟೀಲ, ಪಂಕಜ್ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.////