Belagavi News In Kannada | News Belgaum

ಉತ್ತಮ ಪ್ರಜಾಕೀಯ ಪಕ್ಷ ದಿಂದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಮೊದಲ ನಾಮಪತ್ರ ಸಲ್ಲಿಕೆ

ಬೆಳಗಾವಿ: ಕರ್ನಾಟಕ ರಾಜ್ಯದ ಎರಡನೇ ಹಂತದ ಚುನಾವಣೆ ಮೇ 7ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು ಏಪ್ರಿಲ್ 12 ರಿಂದ ಚುನಾವಣೆ ನಾಮಂಕನ ಪ್ರಾರಂಭವಾಗಿದೆ. ಬೆಳಗಾವಿ ಲೋಕಸಭಾ ಮತಕ್ಷೇತ್ರಕ್ಕೆ ಇಂದು ಉತ್ತಮ ಪ್ರಜಾಕೀಯ ಪಕ್ಷ ವತಿಯಿಂದ ಫ್ರೇಮ ಮಲ್ಲಪ್ಪ ಚೌಗುಲೆ ನಾಮಪತ್ರ ಸಲ್ಲಿಸಿದ್ದು ಇದು ಮೊದಲ ನಾಮಪತ್ರ ಸಲ್ಲಿಕೆಯಾಗಿದೆ.
ನಾಮಪತ್ರ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉತ್ತಮ ಪ್ರಜಾಕೀಯ ಪಕ್ಷ ಕರ್ನಾಟಕದಲ್ಲಿ ಒಂದು ಹೊಸ ರಾಜಕೀಯ ವ್ಯವಸ್ಥೆಯನ್ನು ಸೃಷ್ಟಿ ಮಾಡಲು ಅಸ್ತಿತ್ವಕ್ಕೆ ಬಂದಿದೆ. ರಾಜಕೀಯ ಬದಲಾವಣೆ ಹಾಗೂ ಜನರಿಗೆ ತಮ್ಮ ಜವಾಬ್ದಾರಿ ಮತ್ತು ಈ ಭ್ರಷ್ಟ ವ್ಯವಸ್ಥೆಯ ಕುರಿತು ಹೋರಾಡಲು ಉತ್ತಮ ಪ್ರಜಾಕೀಯ ಪಕ್ಷ ಸಿದ್ಧವಾಗಿದೆ ಎಂದು ಹೆಳಿದರು.
ಈ ಸಂದರ್ಭದಲ್ಲಿ ಪ್ರಸಾದ ಹಿರೇಮಠ, ಕೀರ್ತಿ ಸಾಗರ್ ಶೆಟ್ಟಿ, ಬಸವರಾಜ ಗುಮಾಡಿ, ಚಂದ್ರಕಾಂತ ಅಪ್ಪನ್ನವರ, ಶಹಾ ಪೈಸನ್ ನಾಯಕ,ರಾಜು ಕಲ್ಪತ್ರಿ , ಶೀತಲ್ ಶಿವರಾಜ್ ರಾಮಾಪುರೆ ಕುಮಾರ್ ಗೂಡ್ಯಾಹಾಳ,ಗೂಡ್ಯಾಹಾಳ ಮುತ್ತಪ್ಪ, ಮುಂತಾದವರು ಉಪಸ್ಥಿತರಿದ್ದರು./////