Belagavi News In Kannada | News Belgaum

ಮೈ ಮೇಲೆಲ್ಲಾ ಖರ್ಗೆ ಸಾಧನೆಯ ಟ್ಯಾಟೂ ಹಾಕಿಕೊಂಡ ಅಭಿಮಾನಿ

ಬೆಂಗಳೂರು:  ನೆಚ್ಚಿನ ನಟ, ನಟಿಯರು ಹಾಗೂ ದೇವರ ಚಿತ್ರ ಹೀಗೆ ತಮಗೆ ಇಷ್ಟವಾದದ್ದನ್ನು ಟ್ಯಾಟೂ ಹಾಕಿಸಿಕೊಳ್ಳುವುದನ್ನು ಕೇಳಿದ್ದೇವೆ. ಆದರೆ ಈಗ  ಇಲ್ಲೊಬ್ಬ ಅಭಿಮಾನಿ  ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆಯವರ ಅಭಿಮಾನಿಯೊಬ್ಬರು ತಮ್ಮ ಎದೆ, ಬೆನ್ನು, ತಲೆ ಮೇಲೆ ಈ ಇಬ್ಬರು ನಾಯಕರ ಭಾವಚಿತ್ರಗಳ ಟ್ಯಾಟೂ ಹಾಕಿಸಿಕೊಂಡು ಗಮನ ಸೆಳೆದಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಜಿಲಕೇರಿ ಗ್ರಾಮದ ಹಣಮಂತ ಹೊಸ್ಮನಿ ಎಂಬುವರೇ ಟ್ಯಾಟೂ ಹಾಕಿಸಿಕೊಂಡು ಗಮನ ಸೆಳೆದ ಅಭಿಮಾನಿ.  ಹಣಮಂತ ಹೊಸ್ಮನಿಯವರ ಅಭಿಮಾನಕ್ಕೆ ಮನಸೋತ ಪ್ರಿಯಾಂಕ್‌ ಖರ್ಗೆಯವರು ಇವರನ್ನು ಕಾಂಗ್ರೆಸ್‌ ಸಮಾವೇಶದಲ್ಲಿ ಆಹ್ವಾನಿಸಿ ಅವರಿಗೆ ಡಾ. ಖರ್ಗೆಯವರಿಂದ ಸತ್ಕಾರ ಮಾಡಿಸಿದ್ದಾರೆ.

ಎದೆಯ ಮೇಲೆ ಡಾ. ಖರ್ಗೆ, ಪ್ರಿಯಾಂಕ್‌ ಭಾವಚಿತ್ರ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ತಲೆಯ ಮೇಲೆ ಪಿಕೆ ಬಾಸ್‌ ಎಂದು ಕೇಶ ವಿನ್ಯಾಸ ಮಾಡಿಸಿಕೊಂಡಿದ್ದಾರೆ. ಬೆನ್ನ ಮೇಲೆಲ್ಲಾ ಡಾ.ಮಲ್ಲಿಕಾರ್ಜುನ ಖರ್ಗೆಯವರು ರಾಜಕೀಯವಾಗಿ 5 ದಶಕಗಳ ಕಾಲ ನಡೆದು ಬಂದ ದಾರಿಯ ಮಾಹಿತಿಯನ್ನು ಟ್ಯಾಟೂ ಮೂಲಕ ಬರೆದುಕೊಂಡಿದ್ದಾರೆ./////