Belagavi News In Kannada | News Belgaum

ದೇಶ ಕಟ್ಟುವ ಕೆಲಸ ಕಾಂಗ್ರೆಸ್‌ ಪಕ್ಷ ಮಾಡಿದೆ: ಪ್ರಿಯಂಕಾ ಜಾರಕಿಹೊಳಿ

ಹುಕ್ಕೇರಿ: 1885ರಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್‌ ಪಕ್ಷವು ನೆಹರು, ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಸೇರಿದಂತೆ ಡಾ. ಮನ ಮೋಹನ್‌ ಸಿಂಗ್‌ ಅವಧಿಯವರೆಗೂ ದೇಶದ ಜನರ ಅಭಿವೃದ್ಧಿಗಾಗಿ ನೂರಾರು ಯೋಜನೆಗಳನ್ನು ರೂಪಿಸಿ ದೇಶ ಕಟ್ಟುವ ಕೆಲಸವನ್ನು ಪಕ್ಷ ಮಾಡಿದೆ ಎಂದು ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರು ಹೇಳಿದರು..

 

ಯಮಕನಮರಡಿ ಮತಕ್ಷೇತ್ರದ ಮೋದಗಾ, ಶೆಟ್ಟಿಹಳ್ಳಿ, ಧೋಂಡಗಟ್ಟಿ, ಬೆಳ್ಳಂಕಿ ಹಾಗೂ ಖವನೆವಾಡಿ ಗ್ರಾಮದಲ್ಲಿ ಮತಯಾಚಿಸಿ, ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಿಂದಲೂ ಕಾಂಗ್ರೆಸ್‌ ಪಕ್ಷ ದೇಶಕ್ಕೆ ಅನೇಕ ಕೊಡುಗೆಗಳನ್ನು ನೀಡಿದೆ. ಅದಕ್ಕಾಗಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಧಿಕೃತ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸುವ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು..

 

ಪಂಚವಾರ್ಷಿಕ ಯೋಜನೆ, ವಿದೇಶಾಂಗ ನೀತಿ, ಇಂದಿರಾ ಗಾಂಧಿ ಅವರು ದೇಶದ ಜನರು ಬಡತನದಿಂದ ಹೊರಬರಬೇಕೆಂದು ರೂಪಿಸಿದ 20 ಅಂಶಗಳ ಕಾರ‍್ಯಕ್ರಮ, ರಾಜೀವ್‌ ಗಾಂಧಿ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯವಾಗಿದೆ. ಇನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಪ್ರಣಾಳಿಕೆಯಲ್ಲಿ ನೀಡಿದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದಿದ್ದಾರೆ. ಆದ್ದರಿಂದ ಜನತೆಯ ಹಿತ ಕಾಪಾಡುವ ಕಾಂಗ್ರೆಸ್‌ ಪಕ್ಷವನ್ನೆ ಅಧಿಕಾರಕ್ಕೆ ತರಬೇಕೆಂದು ವಿನಂತಿಸಿದರು..

ಇದೇ ವೇಳೆ ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರನ್ನು ಮಹಿಳೆಯರು ಸತ್ಕರಿಸಿದರು. ಈ ಸಂದರ್ಭದಲ್ಲಿ ಯಶ್ವಂತ್ ಬಾಗಡಿ, ಸಲಾಮವಾಡಿ  ಗ್ರಾಮ ಪಂಚಾಯಿತಿ ಅಧ್ಯಕ್ಷರು ಸ್ಮಿತಾ ಕೊಕಿತ್ಕಲ್, ಶರದ್ ಪಾಟೀಲ್, ಪಿಂಟು ವಡ್ಡರ್, ವಿಠ್ಠಲ್ ಗುರವ, ವಂದನಾ ಕಳವಿಕಟ್ಟಿ, ರತನಪ್ಪ ಕುಂಬಾರ್, ಗ್ರಾಮ ಪಂಚಾಯತಿ ಉಪಾಧ್ಯಕ್ಷರು ದಯಾನಂದ್ ಸಿಂಧೆ, ಸಂಜಯ್ ಪಾಟೀಲ್, ವಿಠ್ಠಲ್ ಕುಂಬಾರ್, ಕಲ್ಪನಾ ಕುರಾಡೆ, ಬ್ಲಾಕ್ ಅಧ್ಯಕ್ಷರು ಮಾಂತೇಶ್ ಮಗದುಮ್, ಸಚಿವರ ಆಪ್ತ ಸಹಾಯಕ ದಯಾನಂದ್ ಪಾಟೀಲ್ ಸೇರಿದಂತೆ ಯಮಕನಮರಡಿ ಮತಕ್ಷೇತ್ರದ ಮೋದಗಾ, ಶೆಟ್ಟಿಹಳ್ಳಿ, ಧೋಂಡಗಟ್ಟಿ, ಬೆಳ್ಳಂಕಿ ಹಾಗೂ ಖವನೆವಾಡಿ ಗ್ರಾಮದ ಕಾಂಗ್ರೆಸ್‌ ಪಕ್ಷದ ಮುಖಂಡರು, ಹಿರಿಯರು, ಮಹಿಳೆಯರು ಸೇರಿದಂತೆ ಅಪಾರ ಸಂಖ್ಯೆಯ ಯುವಕರು ಪಾಲ್ಗೊಂಡಿದ್ದರು.