Belagavi News In Kannada | News Belgaum

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಮಾಲಾರ್ಪಣೆ

ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಜನ್ಮ ದಿನದ ನಿಮಿತ್ತ
ಬೆಳಗಾವಿಯ ಸದಾಶಿವನಗರದ ಬಳಿ ಅಂಬೇಡ್ಕರ್ ನಗರದ ಅಂಬೇಡ್ಕರ್ ಭವನದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮತ್ತು ಬೆಳಗಾವಿ ಲೋಕಸಭಾ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್ ಅವರು ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.
ಈ ಸಮಯದಲ್ಲಿ ವಿಜಯರಾಜ ಕುಡಚಿ, ಪಿಂಟು ಗುಂಡಪ್ಪನವರ, ಸತೀಶ್ ಕುರಣೆ, ಗುಂಡು ಗುಂಡಪ್ಪನವರ, ಸಂಜು ಅಳಗೂಡ್ಕರ್, ಎಂ.ಆಯ್.ನಜರೆ ಮುಂತಾದವರು ಉಪಸ್ಥಿತರಿದ್ದರು.