Belagavi News In Kannada | News Belgaum

ಸಚಿವ ಜಮೀರ್​​ ಅಹ್ಮದ್​ ಖಾನ್​​ ದಿಢೀರ್​ ಆಸ್ಪತ್ರೆಗೆ ದಾಖಲು

ಚಿತ್ರದುರ್ಗ: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಕಾವು ಜೋರಾಗಿದೆ. ತುಮಕೂರಲ್ಲಿ ಪ್ರಚಾರ ಮುಗಿಸಿ ಸಚಿವ ಜಮೀರ್​ ಅಹ್ಮದ್​ ಖಾನ್​​​ ಇಂದು ಕಾಂಗ್ರೆಸ್​ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಚಿತ್ರದುರ್ಗಕ್ಕೆ ಬಂದಿದ್ದರು. ಇಂದು ಚಿತ್ರದುರ್ಗದಲ್ಲಿ ಕಾಂಗ್ರೆಸ್​ ಪರ ಪ್ರಚಾರ ಮಾಡಲು ಬರುವಾಗ ದಿಢೀರ್​ ಎದೆನೋವು ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಜಮೀರ್​ ಅಹ್ಮದ್​ ಖಾನ್​ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇನ್ನು, ಚಿತ್ರದುರ್ಗದ ಬಸವೇಶ್ವರ್​​ ಆಸ್ಪತ್ರೆಗೆ ಜಮೀರ್​​ ಅವರನ್ನು ದಾಖಲು ಮಾಡಲಾಗಿದೆ. ಮೊದಲಿಗೆ ಜಮೀರ್​ ಅವರಿಗೆ ಬೆನ್ನುನೋವು ಕಾಣಿಸಿಕೊಂಡಿದ್ದು, ನಂತರ ಎದೆನೋವು ಬಂದಿದೆ. ಹೀಗಾಗಿ ಜಮೀರ್​ ಅವರಿಗೆ ಇಸಿಜಿ ಮತ್ತು ಎಕೋ ಪರೀಕ್ಷೆ ನಡೆಸುತ್ತಿದ್ದಾರೆ ಎಂದು ಹೃದ್ರೋಗ ತಜ್ಞ ಡಾ. ಕಾರ್ತಿಕ್ ಮಾಹಿತಿ ನೀಡಿದ್ದಾರೆ.//////