Belagavi News In Kannada | News Belgaum

ನಾಮಪತ್ರಕ್ಕೆ ಪೂಜೆ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಅವರು ಇಂದು ಚಿಕ್ಕ ಹಟ್ಟಿಹೊಳಿ ಗ್ರಾಮದಲ್ಲಿರುವ ಮನೆ ದೇವರಾದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಾಮ ಪತ್ರಕ್ಕೆ ಪೂಜೆ ಸಲ್ಲಿಸಿದರು.
ದೇವಸ್ಥಾನದ ಅರ್ಚಕರು ವಿವಿಧ ಪೂಜಾ ಕೈಂಕರ್ಯಗಳನ್ನು ಕೈಗೊಂಡರು. ವಿಶೇಷ ಪೂಜೆ ಬಳಿಕ ದೇವರ ಮುಂದೆ ಕುಳಿತು ನಾಮಿನೇಶನ್ ಫಾರ್ಮ್ ಪ್ರತಿಗಳಿಗೆ ಮೃಣಾಲ್‌ ಸಹಿ ಹಾಕಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಶ್ರೀ ವೀರಭದ್ರೇಶ್ವರ ದೇವಸ್ಥಾನ‌ ಟ್ರಸ್ಟ್ ಕಮಿಟಿಯ ಗೌರವ ಅಧ್ಯಕ್ಷರಾದ ಎಸ್. ಎಸ್.ಕಿವಡಸನ್ನವರ, ಅಧ್ಯಕ್ಷರಾದ ಗಿರಿಗೌಡ ನಿಂಗನಗೌಡ ಪಾಟೀಲ, ಉಪಾಧ್ಯಕ್ಷರಾದ ‌ಶ್ರೀಶೈಲ‌ ಸಾತೀರಯ್ಯಾ ಪೂಜಾರ, ಕಾರ್ಯದರ್ಶಿಗಳಾದ ವಿನಯ ಬಸಯ್ಯಾ ಪೂಜಾರ ಸೇರಿದಂತೆ ಕಮಿಟಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.//////