Belagavi News In Kannada | News Belgaum

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಕೆ

ಬೆಳಗಾವಿ : ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದರು.
ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಶೆಟ್ಟರ್ ಪರವಾಗಿ ಸಂಸದೆ ಮಂಗಳಾ ಅಂಗಡಿ, ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಶಾಸಕ ಹನುಮಂತ ನಿರಾಣಿ, ಮಾಜಿ ಶಾಸಕ ಅನೀಲ್ ಬೆನಕೆ ಜೊತೆಯಾದರು. ಬರುವ ಬುಧವಾರ ಮತ್ತೊಮ್ಮೆ ಬಿಜೆಪಿ ಹಿರಿಯ ನಾಯಕರ ಜೊತೆಗೂಡಿ ಜಗದೀಶ್ ಶೆಟ್ಟರ್ ‌ನಾಮಪತ್ರ ಸಲ್ಲಿಸಲಿದ್ದಾರೆ.
ಶೆಟ್ಟರ್ ಆಸ್ತಿ ವಿವರ
ಜಗದೀಶ್ ಶೆಟ್ಟರ್ ಒಟ್ಟು ಆಸ್ತಿ ಮೌಲ್ಯ – ಒಟ್ಟು ಆಸ್ತಿ 12.45 ಕೋಟಿ
ಚರಾಸ್ತಿ 2.63 ಕೋಟಿ, ಸ್ಥಿರಾಸ್ತಿ 9.82 ಕೋಟಿ
ಸಾಲ  – 57.26 ಲಕ್ಷ‌, ಹಾಗೂ 15.37 ಲಕ್ಷ ನಗದು ಹೊಂದಿದ್ದಾರೆ
43.94 ಲಕ್ಷ ಮೌಲ್ಯದ ಚಿನ್ನಾಭರಣ ಇದ್ದು ಇವರ ಬಳಿ ಸ್ವಂತ ವಾಹನ ಇಲ್ಲ.
ಶೆಟ್ಟರ್ ಪತ್ನಿ  ಶಿಲ್ಪಾ ಶೆಟ್ಟರ್ ಹೆಸರಿನಲ್ಲಿ 2.50 ಲಕ್ಷ  ನಗದು
ಚರಾಸ್ತಿ 91.10 ಲಕ್ಷ , ಸ್ಥಿರಾಸ್ತಿ 1ಲಕ್ಷ ಹಾಗೂ 14.40 ಲಕ್ಷ ಸಾಲ ಇದೆ
70.90 ಲಕ್ಷ ಮೌಲ್ಯದ 1.100 ಕೆಜಿ. ಚಿನ್ನ, 3 ಕೆಜಿ. ಬೆಳ್ಳಿ ಜಗದೀಶ್ ಶೆಟ್ಟರ್ ಹೊಂದಿದ್ದಾರೆ.