Belagavi News In Kannada | News Belgaum

ಶಾಸಕ ಯತ್ನಾಳ್ ಸಿಎಂ ಆದರೆ ನಮಗೂ ಖುಷಿ: ಶಾಸಕ ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ:  ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಗೆಲುವು ಸಾಧಿಸಲಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಜನ ಬಂದಿರುವುದು ನೋಡಿದರೆ ಶೆಟ್ಟರ್ ಆಯ್ಕೆ ಖಚಿತ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದರು .
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆ ಬಗ್ಗೆ ಕುಮಾರಸ್ವಾಮಿಯವರು ಈಗಾಗಲೇ ಉತ್ತರ ಕೊಟ್ಟಿದ್ದಾರೆ, ಶಾಸಕ ಬಸನಗೌಡ ಯತ್ನಾಳ ಸಿಎಂ ಆದ್ರೇ ನಮ್ಮಗೆ ಎಲ್ಲಾ ಸಂತೋಷ ನಮ್ಮ ಉತ್ತರ ಕರ್ನಾಟಕ ಭಾಗ ತುಂಬಾನೇ ಅಭಿವೃದ್ದಿಯಾಗುತ್ತೇದೆ ಎಂದು ಹೇಳಿದ್ದರು.

ಆರಂಭದಲ್ಲಿ ನಮ್ಮಲ್ಲಿವಿದ ಅಸಮಾಧಾನದಿಂದ ಹೊರಗಿನವರು ಒಳಗಿನವರು ಮಾತು ಬಂತು ಜಗದೀಶ್ ಹೊರಗಿನವರು ಅಲ್ಲ ಎಲ್ಲದಕ್ಕೂ ಜಗದೀಶ್ ಶೆಟ್ಟರ್ ಉತ್ತರ ಕೊಟ್ಟಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಯವರು ಹಾಗೇ ಹೇಳುತ್ತಾ ಇರುತ್ತಾರೆ. ಸಾಕಷ್ಟು ಸಂಖ್ಯೆಯಲ್ಲಿ ಜನ ಬಂದಿರುವುದು ನೋಡಿದರೆ ಶೆಟ್ಟರ್ ಅತ್ಯಧಿಕ ಮತಗಳಿಂದ ಗೆದ್ದು ಬರುತ್ತಾರೆ ಎಂದು ಹೇಳಿದ್ದರು ./////