Belagavi News In Kannada | News Belgaum

ಬಿಜೆಪಿ ಅಭ್ಯರ್ಥಿ ಶೆಟ್ಟರ್ ಗೆಲುವು ಖಚಿತ: ಮಾಜಿ ಸಿಎಂ ಬಿಎಸ್‌ವೈ

ಬೆಳಗಾವಿ: ಕಾಂಗ್ರೆಸ್ ನವರು ಜಾತಿ ಆಧಾರದ ಮೇಲೆ ಬೇಕಾದರೆ ರಾಜಕಾರಣ ಮಾಡಿಕೊಳ್ಳಲಿ ನಾವು, ಹಿಂದೂ, ಮುಸ್ಲಿಂ ಬೇಧ ಭಾವ ಇಲ್ಲ. ಎಲ್ಲರ ಬೆಂಬಲದೊಂದಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಗೆಲುವು ಸಾಧಿಸುತ್ತಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬುಧವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಎನಾದರೂ ಮಾಡಿಕೊಳ್ಳಲಿ, ನಾವು ಹಿಂದೂ, ಮುಸ್ಲಿಂ ಬೇಧ ಭಾವ ಇಲ್ಲ ಎಲ್ಲರ ಬೆಂಬಲದೊಂದಿಗೆ ಗೆಲುತ್ತೇವೆ ಎಂದರು.
ಇಂದು ಜಗದೀಶ್ ಶೆಟ್ಟರ್ ನಾಮಪತ್ರ ಸಲ್ಲಿಕೆಗೆ ನಾನು ಬೈರತಿ ಬಸವರಾಜ್, ಲೆಹರ್ ಸಿಂಗ್ ಬಂದಿದ್ದೇವೆ‌. ಮೆರವಣಿಗೆ ಆರಂಭವಾಗಿದ್ದು ಅವರ ಜೊತೆ ಸೇರಿ ನಾಮಪತ್ರ ಸಲ್ಲಿಸುತ್ತೇ‌ನೆ. ಇದಾದ ಬಳಿಕ ಕೊಪ್ಪಳಕ್ಕೆ ಹೋಗಬೇಕು. ವಾತಾವರಣ ಎಲ್ಲಾ ಕಡೆಗಳಲ್ಲಿ ಅನಕೂಲಕರವಾಗಿದೆ‌‌. ನಾನು ಈ ಹಿಂದೆ ಹೇಳಿದಂತೆ 28ಕ್ಕೆ 28 ಕ್ಷೇತ್ರ ಗೆಲ್ಲುವ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ ಎಂದರು.///////