Belagavi News In Kannada | News Belgaum

ಡಾ. ಬಿ.ಆರ್.‌ ಅಂಬೇಡ್ಕರ್ ಕಟೌಟ್ ಹರಿದ ಕಿಡಿಗೇಡಿಗಳು; ಕ್ರಮಕ್ಕೆ ದಲಿತಪರ ಸಂಘಟನೆಗಳ ಆಗ್ರಹ

ಪಾಲಬಾವಿ ಗ್ರಾಮದಲ್ಲಿ ಕಿಡಿಗೇಡಿಗಳಿಂದ ಡಾ. ಬಿ.ಆರ್.‌ ಅಂಬೇಡ್ಕರ್ ಬ್ಯಾನರ್ ಹರಿದು ಅಪಮಾನ

ರಾಯಬಾಗ:  ಗ್ರಾಮದಲ್ಲಿ ಬಸ್ ನಿಲ್ದಾಣದ ಮುಂಭಾಗದಲ್ಲಿ ನಿಲ್ಲಿಸಿದ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಕಟೌಟ್ ನ್ನು ಕೆಲವು ಕಿಡಿಗೇಡಿಗಳು ಹರಿದು ಅಪಮಾನ ಮಾಡಿದ್ದಾರೆ.

ತಾಲೂಕಿನ ಪಾಲಬಾವಿ ಗ್ರಾಮದ ಬಸ್ ನಿಲ್ದಾಣ ಮುಂದೆ ನಿಲ್ಲಿಸಿದ ಅಂಬೇಡ್ಕರ್ ಬ್ಯಾರನ್ನರ್ ಹರಿದ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಕಳೆದ ಏಪ್ರಿಲ್ 14ರಂದು ವಿಶ್ವಜ್ಞಾನಿ, “ಸಂವಿಧಾನ ಶಿಲ್ಪಿ” ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 133ನೇ ಜಯಂತಿಯ ನಿಮಿತ್ಯವಾಗಿ ವಿವಿಧ ದಲಿತ ಸಂಘಟಕರು ಯುವಕರು ಸೇರಿಕೊಂಡು ಡಾ. ಬಾಬಾಸಾಹೇಬ್ ಅಂಬೇಡ್ಕರ್  ಅವರ ಪ್ಲೆಕ್ಸ್ (ಬ್ಯಾನರ್) ನ್ನು ಬಸ್ ನಿಲ್ದಾಣದ ಬಳಿ ಅಳವಡಿಸಿದ್ದರು. ಕೆಲವು ಕಿಡಿಗೇಡಿಗಳು ಬುಧವಾರ ರಾತ್ರಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬ್ಯಾನರ್ ಹರಿದದ್ದು ಬೆಳಕಿಗೆ ಬಂದಿದೆ.

ಬೆಳಗ್ಗೆ ಬ್ಯಾನರ್ ಹರಿದ ಸುದ್ದಿ ತಿಳಿಯುತ್ತಿದಂತೆ ಎಲ್ಲ ದಲಿತಪರ ಸಂಘಟಕರು, ಯುವಕರು ಬಸ್ ನಿಲ್ದಾಣಕ್ಕೆ ಸೇರಿ ಬ್ಯಾನರ್ ಹರಿದ ಕಿಡಿಗೇಡಿಗನ್ನು ಪತ್ತೆಹಚ್ಚಬೇಕು ಅವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. ಘಟನಾ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿಯವರು ಆಗಮಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು.
………..ಕೋಟ್‌…….

ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬ್ಯಾನರ್ ಹರಿಯೋದು ಕೀಳು ಮಟ್ಟದ ವಿಚಾರವಾಗಿದ್ದು, ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ ಅವರ ಬ್ಯಾನರ್ ಹರಿದವರು ಯಾರೇ ಆಗಿರಲಿ ಅವರನ್ನು ಪತ್ತೆ ಹಚ್ಚಿ ಬಂಧಿಸಿ ಅವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು, ದಲಿತ ಪರ ಸಂಘಟಕರು ಹಾಗೂ ಗ್ರಾಮಸ್ಥರು ಸಹಕರಿಸಬೇಕು.
-ಗಿರಿಮಲ್ಲಪ್ಪ ಉಪ್ಪಾರ, ಪಿಎಸ್ಐ. ಹಾರೂಗೇರಿ ಪೊಲೀಸ್ ಠಾಣೆ.//////