Belagavi News In Kannada | News Belgaum

ಆರೋಗ್ಯ ಸಮತೋಲನಕ್ಕೆ ಕ್ರೀಡೆ ಅವಶ್ಯ: ರಾಹುಲ್‌ ಜಾರಕಿಹೊಳಿ

ರಾಯಬಾಗ: ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಪಡೆಯಲು ಸಾಧ್ಯವಾಗುತ್ತದೆ ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ತಿಳಿಸಿದರು.

ರಾಯಬಾಗ ತಾಲೂಕಿನ ಮುಗಳಕೋಡ ಗ್ರಾಮದ ಜೀಡಗಾ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳ ಅವರ ಆಶೀರ್ವಾದ ಪಡೆದ ನಂತರ ಮಠದ ಜಾತ್ರೆಯ ನಿಮಿತ್ತವಾಗಿ ಹಮ್ಮಿಕೊಳ್ಳಲಾದ ರಾಷ್ಟ್ರ ಮಟ್ಟದ ಜಂಗಿ‌ ನಿಕಾಲಿ‌ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಶುಭ ಹಾರೈಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಮನುಷ್ಯನ ದೇಹ ಮತ್ತು ಮನಸ್ಸಿನ ಸಮತೋಲನ ಸಾಧಿಸುವಲ್ಲಿ ಕ್ರೀಡೆಯ ಪ್ರಾಮುಖ್ಯ ಬಹಳಷ್ಟಿದೆ. ಇಂದು ಸಮಾಜದಲ್ಲಿ ಮಠ ಮಾನ್ಯಗಳು ದೇಶಿ ಕ್ರೀಡೆಗಳನ್ನು ಆಯೋಜಿಸುತ್ತಿರುವುದರಿಂದ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯವಾಗಿದೆ ಎಂದರು.

ಯುವಕರು ರಾಜ್ಯ, ರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಕ್ರೀಡೆಯಲ್ಲಿ ಎಲ್ಲರೂ ಗೆಲ್ಲಲ್ಲೂ ಸಾಧ್ಯವಿಲ್ಲ. ಸೋಲು ಯಾವುದೇ ಕಾರಣಕ್ಕೂ ನಿರಾಶೆ ಉಂಟು ಮಾಡಬಾರದು. ಛಯಗಳಿಂದ ಲ ಹುಟ್ಟಿಸಬೇಕು ಎಂದರು.

ಇದೇ ವೇಳೆ ರಾಷ್ಟ್ರ ಮಟ್ಟದ ಜಂಗಿ‌ ನಿಕಾಲಿ‌ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಯುವ ನಾಯಕ ರಾಹುಲ್‌ ಜಾರಕಿಹೊಳಿ ಶುಭ ಕೋರಿದರು.

ಈ ಸಂದರ್ಭದಲ್ಲಿ ರಮೇಶ ಯಡವಣ್ಣವರ, ಗೋಪಾಲ ಯಡವಣ್ಣವರ, ಬಸವರಾಜ ಜೋಪಾಟಿ, ಅರ್ಜುನ ನಾಯಿಕವಾಡಿ, ಶ್ರೀಶೈಲ ಅಂಗಡಿ, ಪರಪ್ಪಗೌಡ ಖೇತಗೌಡ, ಶ್ರೀಶೈಲ ಗೋಕಾಕ, ಬಸವರಾಜ ಸಾಯನ್ನವರ, ಮುಪ್ಪಯ್ಯ ಹಿರೇಮಠ, ಯಲ್ಲಾಲಿಂಗ ಖೇತಗೌಡರ, ಆನಂದ ಯರಡತ್ತಿ, ಗಂಗಪ್ಪ ಗೋಕಾಕ, ಹನುಮಂತ ಕುಲಿಗೋಡ, ವಿಜಯ ಅಸೋದೆ, ಲಕ್ಷ್ಮಣ ಗೋಕಾಕ, ಪ್ರಕಾಶ ಹುದ್ದಾರ, ಶ್ರೀಶೈಲ ಕಡಕೋಳ, ಪಂಡಿತ ಆಸೋದೆ, ಮುತ್ತಪ್ಪ ಹುಕ್ಕೇರಿ, ಪರಶುರಾಮ ಹಳ್ಳೂರ, ಅಡಿವೆಪ್ಪ ತೋಟಗಿ, ದಾದು ತಹಶೀಲ್ದಾರ್, ಮಲ್ಲಪ್ಪ ದಾಶ್ಯಾಳ, ಪರಶುರಾಮ ಯರಡತ್ತಿ, ರಾಜು ಕದಂ, ಇತರರು ಇದ್ದರು.//////