Belagavi News In Kannada | News Belgaum

ಹುಬ್ಬಳ್ಳಿ ಕಾರ್ಪೋರೆಟರ್‌ ಮಗಳ ಬರ್ಬರ ಕೊಲೆ: ಮುಗ್ಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಹುಬ್ಬಳ್ಳಿ: ಹು-ಧಾರವಾಡ ಮಹಾನಗರ ಪಾಲಿಕೆ ಸದಸ್ಯನ ಮಗಳನ್ನು ದುಷ್ಕರ್ಮಿಗಳು  ಬರ್ಬರವಾಗಿ ಹತ್ಯೆಗೈದಿರುವ ಘಟನೆ  ಹುಬ್ಬಳ್ಳಿ ಪ್ರತಿಷ್ಠತ ಬಿವಿಬಿ ಕಾಲೇಜ್‌ ನಲ್ಲಿ  ನಡೆದಿದೆ.

ಹಾಡಹಗಲೇ ಪ್ರತಿಷ್ಠಿತ ಕಾಲೇಜು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸ್ನೇಹಾ ಹಿರೇಮಠ್ ಮೃತ ದುರ್ದೈವಿ.  ಸ್ನೇಹಾ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಸದಸ್ಯ ನಿರಂಜನ ಹಿರೇಮಠ ಪುತ್ರಿ.

ಹುಬ್ಬಳ್ಳಿಯ ಬಿವಿಬಿ ಕಾಲೇಜ್ ಕ್ಯಾಂಪಸ್‌ನಲ್ಲಿ ಈ ದಾರುಣ ಘಟನೆ ನಡೆದಿದೆ. ಶಾಂತವಾಗಿದ್ದ ಹುಬ್ಬಳ್ಳಿ ನಗರದಲ್ಲಿ ಮತ್ತೆ ಚಾಕು ಇರಿತದ ಕ್ರೌರ್ಯ ಸದ್ದು ಮಾಡಿದೆ. ಸ್ನೇಹಾ ಹಿರೇಮಠ ಕುತ್ತಿಗೆಗೆ ಚಾಕು ಇರಿದ ಯುವಕ ಪರಾರಿಯಾಗಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಸ್ನೇಹಾನನ್ನು ಕಿಮ್ಸ್ ಆಸ್ಪತ್ರೆಗೆ ಕರೆತರುವ ಮಾರ್ಗದಲ್ಲಿಯೇ ಸಾವನ್ನಪ್ಪಿದ್ದಾರೆ.

ಪ್ರೀತಿ ನಿರಾಕರಿಸಿದ್ದಕ್ಕೆ ಚಾಕು ಹಾಕಿದ ಫಯಾಜ್
ಕೊಲೆಯಾದ ನೇಹಾ ಹಿರೇಮಠ ಬಿವಿಬಿ ಕಾಲೇಜಿನಲ್ಲಿ ಎಂಸಿಎ ಓದುತ್ತಿದ್ದಳು. ಇನ್ನು ಕೊಲೆ ಆರೋಪಿ ಫಯಾಜ್‌ ಸಹ ಅದೇ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದಾನೆ. ಹೀಗಾಗಿ ಪ್ರೀತಿ ಮಾಡಲು ನಿರಾಕರಿಸಿದ್ದಕ್ಕೆ ನೇಹಾಳನ್ನು ಕೊಲೆ ಮಾಡಿದ್ದಾನೆ. ಕಳೆದ ಕೆಲ ದಿನಗಳಿಂದ ಪ್ರೀತಿಸುವಂತೆ ನೇಹಾಳ ಬೆನ್ನುಬಿದ್ದಿದ್ದ. ಆದ್ರೆ, ನೇಹಾ ಪ್ರೀತಿಗೆ ನಿರಾಕರಿಸಿದ್ದಳು. ಇದರಿಂದ ಕೋಪಗೊಂಡು ಫಯಾಜ್, ನೇಹಾಳ ಕುತ್ತಿಗೆಯ 2 ಕಡೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಸವದತ್ತಿ ಮೂಲದ ನಿವಾಸಿಯಾದ   ಪಯಾಜ್‌   ಕೊಲೆ ಆರೋಪಿಯಾದ. ಘಟನಾ ಸ್ಥಳಕ್ಕೆ ವಿದ್ಯಾನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುತ್ತಿಗೆಗೆ ಚಾಕು ಇರಿತ ಮಾಡಿದ ಯುವಕನಿಗಾಗಿ ಪೊಲೀಸರು ಜಾಲ ಬೀಸಿದಿದ್ದಾರೆ.