Belagavi News In Kannada | News Belgaum

ಬಡವರ-ರೈತರ ಪಕ್ಷ ಅದುವೇ ಕಾಂಗ್ರೆಸ್: ಸಚಿವ ಸತೀಶ್‌ ಜಾರಕಿಹೊಳಿ

ಬೆಳಗಾವಿ: ಬಡವರು, ರೈತರು ಹಾಗೂ ಜನಸಾಮಾನ್ಯರ ಪರ ಕೆಲಸ ಮಾಡಿ ಅವರ ಕುಂದು ಕೊರತೆಗಳಿಗೆ ಸ್ಪಂದಿಸುವಂತಹ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಪ್ರಿಯಂಕಾ ಅವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಿ ಎಂದು ಸಚಿವ ಸತೀಶ್‌ ಜಾರಕಿಹೊಳಿ ಮನವಿ ಮಾಡಿದರು.

ಕುಡಚಿ ವಿಧಾನಸಭಾ ಮತಕ್ಷೇತ್ರದ ಗುಂಡವಾಡ, ಶಿರಗೂರ,  ಪರಮಾನಂದವಾಡಿ, ಖೇಮಲಾಪೂರ ಗ್ರಾಮಗಳಲ್ಲಿ ಆಯೋಜಿಸಿದ್ದ ಚಿಕ್ಕೋಡಿ ಲೋಕಸಭೆಯ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷ 2013ರಲ್ಲಿ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಪ್ರಣಾಳಿಕೆಯಲ್ಲಿ 165 ಭರವಸೆಗಳನ್ನು ನೀಡಿತು 158 ಭರವಸೆಗಳನ್ನು ಈಡೇರಿಸಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಶೂ ಭಾಗ್ಯ, ರೈತರ ಸಾಲ ಮನ್ನಾ, ಇಂದಿರಾ ಕ್ಯಾಂಟೀನ್ ಹಾಗೂ ವಿದ್ಯಾಸಿರಿ ಯೋಜನೆಗಳನ್ನು ಈಡೇರಿಸಿದೆ ಎಂದರು.

ರಾಯಬಾಗ ಹಾಗೂ ಚಿಕ್ಕೋಡಿ ಭಾಗದಲ್ಲಿಕೂಡಾ ಸಾಕಷ್ಟು ಅಭಿವೃದ್ಧಿಗೆ ಕೆಲಸ ಮಾಡಲಾಗಿದೆ.  ಚಿಂಚಲಿ ಗ್ರಾಮದಲ್ಲಿ ನಮ್ಮ ಕಾರ್ಯಕರ್ತರು ಹಾಗೂ ಹಿಂದೆ ಪಕ್ಷೇತರವಾಗಿದ್ದ ಕಾರ್ಯಕರ್ತರು ಇಂದು ಒಂದಾಗಿದ್ದರಿಂದ ನಮ್ಮ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ.  ಈ ಬಾರಿ ಇದೊಂದು ಒಳ್ಳೆಯ ಅವಕಾಶವಿದ್ದು,  ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚು ಬೆಂಬಲ ನೀಡಲು ಮುಂದಾಗಬೇಕು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಒಂಬತ್ತು ತಿಂಗಳ ಒಳಗೆ ಐದು ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿದೆ. ಪ್ರತಿಯೊಂದು ಕುಟುಂಬಗಳಿಗೆ ನಾಲ್ಕರಿಂದ ಐದು ಸಾವಿರ ಹಣ ಉಳಿತಾಯವಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಿಂದ ಪ್ರತಿಯೊಂದು ಮನೆಯ ಗೃಹಿಣಿಯರು 2000 ಪಡೆದುಕೊಳ್ಳುತ್ತಿದ್ದಾರೆ. ವಿಧ್ಯುತ್ ಅನ್ನು ಉಚಿತವಾಗಿ ಪಡೆದುಕೊಳ್ಳುತ್ತಿದ್ದಾರೆ. ಶಕ್ತಿ ಯೋಜನೆಯಡಿ ಉಚಿತವಾಗಿ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ. ಅನ್ನಭಾಗ್ಯದಲ್ಲಿ 5 ಕೆಜಿ ಅಕ್ಕಿ 5 ಕೆ.ಜಿ ಗೆ ಹಣವನ್ನು ಪಡೆಯುತ್ತಿದ್ದಾರೆ. ಆದ್ದರಿಂದ ಈ ಬಾರಿ ಪ್ರತಿಯೊಬ್ಬರು ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಬೇಕು ಎಂದು ಮನವಿ ಮಾಡಿದರು.


ಕಾಂಗ್ರೆಸ್‌ ಗ್ಯಾರಂಟಿ ಜನರಿಗೆ ತಿಳಿಸಿ: ಕೇವಲ ಇನ್ನು 15 ದಿನಗಳು ಬಾಕಿ ಉಳದಿದ್ದು,  ಕಾರ್ಯಕರ್ತರು ಮನೆ ಮನೆಗೆ ತೆರಳಿ ಕಾಂಗ್ರೆಸ್‌ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳ ಕುರಿತು ಮಾಹಿತಿ ತಿಳಿಸಿ  ಕೈ ಅಭ್ಯರ್ಥಿ ಪ್ರಿಯಂಕಾ ಅವರಿಗೆ ಹೆಚ್ಚು ಮತ ಹಾಕುವಂತೆ ತಿಳಿಹೇಳಬೇಕು.  ನಮ್ಮ ಪಕ್ಷದ ಗ್ಯಾರಂಟಿಗಳಿಂದ ಬಡ ಜನರು ಹಾಗೂ ಹೆಣ್ಣು ಮಕ್ಕಳ ಅರ್ಥಿಕ ಸ್ಥಿತಿ ಸುಧಾರಣೆ ಕಂಡಿದೆ. ದೇಶ ಕಟ್ಟುವಲ್ಲಿ ಕಾಂಗ್ರೆಸ್ ಪಕ್ಷ ಅಪಾರ ಕೊಡುಗೆ ನೀಡಿದೆ. ಬ್ಯಾಂಕ್ ರಾಷ್ಟ್ರೀಕರಣ, ಗರೀಬಿ ಹಠಾವೋ, ನೀರಾವರಿ, ರಸ್ತೆಗಳು, ಶಾಲಾ ಕಾಲೇಜು, ವಿಶ್ವ ವಿದ್ಯಾಲಯಗಳು, ಇಸ್ರೊ ಸಂಸ್ಥೆ ಕಟ್ಟುವಂತಹ ಹಲವಾರು ಕೆಲಸಗಳನ್ನು ಮಾಡಿದೆ.   ಅಲ್ಲದೇ ಕಳೆದ ವಿಧಾನ ಸಭೆಯ ಚುನಾವಣೆಯಲ್ಲಿ ಕೊಟ್ಟ ಎಲ್ಲ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನಮ್ಮ ಸರ್ಕಾರ ನುಡಿದಂತೆ ನಡೆದಿದೆ.  ಹೀಗಾಗಿ ಈ ಭಾರಿ ಚಿಕ್ಕೋಡಿ ಸಮಗ್ರ ಅಭಿವೃದ್ಧಿಗೆ ಕೈ ಅಭ್ಯರ್ಥಿ ಪ್ರಿಯಂಕಾಗೆ ಬೆಂಬಲಿ ನೀಡಿ, ಕಾಂಗ್ರೆಸ್‌ ಪಕ್ಷ ಬಲಪಡಿಸಬೇಕು ಎಂದು ಮನವಿ ಮಾಡಿದರು.

 


ಕುಡಿಯುವ ನೀರಿಗೆ ಕ್ರಮ:  ಚಿಂಚಲಿ ಗ್ರಾಮಕ್ಕೆ ಸುಮಾರು ವರ್ಷಗಳಿಂದ ನಮಗೆ ಸಂದಂಭವಿದೆ.  ಜಾತ್ರೆ ಬಂದರೆ ಸಾಕು  ಇಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಈ ಗ್ರಾಮಕ್ಕೆ ಆಗಮಿಸುತ್ತಾರೆ. ಇಲ್ಲಿನ ಜನರಿಗೆ ಹಾಗೂ ಭಕ್ತರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಪ್ರತಿ ಭಾರಿ ನೀರು ಬೀಡಲಾಗುತ್ತಿದೆ. ಈ ಭಾರಿ  ಹೆಚ್ಚಿನ ಪ್ರಮಾಣದಲ್ಲಿ  ಮೂರು ಹೊಳೆಗಳ ಮೂಲಕ ನೀರು ಬಿಡಲು ಹೆಚ್ಚಿನ ಪ್ರಯೋಗ ಮಾಡಲಾಗುತ್ತಿದೆ.  ಈ ಬಾರಿ ಇಲ್ಲಿನ ಜನರು ಇನ್ನು ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಕಾಂಗ್ರೆಸ್‌ಗೆ ಮತ ನೀಡಬೇಕು ಎಂದು ಹೇಳಿದರು.

ಇದಕ್ಕೂ ಮೊದಲು ವಿವಿಧ ಗ್ರಾಮಗಳಿಗೆ ಆಗಮಿಸಿದ ಸಚಿವ ಸತೀಶ್‌ ಜಾರಹೊಳಿ ಹಾಗೂ ಯುವ ನಾಯಕ ರಾಹುಲ್‌ ಜಾರಕಿಹೊಳಿ ಅವರಿಗೆ ಗ್ರಾಮದ ಮುಖಂಡರು ಸನ್ಮಾನಿಸಿದರು. ಅಲ್ಲದೇ  ಕಾಂಗ್ರೆಸ್‌ ಪಕ್ಷದ ಸಾಧನೆ ಹಾಗೂ ಸಚಿವ ಸತೀಶ್‌ ಜಾರಕಿಹೊಳಿ ಅವರ ಅಭಿವೃದ್ಧಿ  ಕಾರ್ಯ ನೋಡಿ  ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರು ಸಚಿವ ಸತೀಶ್ ಜಾರಕಿಹೊಳಿ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.

ಈ ವೇಳೆ ಶಾಸಕ ಮಹೇಂದ್ರ ತಮ್ಮಣ್ಣವರ , ಮಾಜಿ ಶಾಸಕ ಶಾಮರಾವ್  ಗಾಟಗೆ, ಯುವ ಮುಖಂಡ ರಾಹುಲ್ ಜಾರಕಿಹೊಳಿ, ಡಾ. ಎನ್.ಎ. ಮಗದುಮ, ಡಾ. ಸಿ.ಬಿ. ಕುಲಗೋಡ, ಧರ್ಮಣ್ಣಾ ನಾಯಕ, ಅರ್ಜುನ ನಾಯಕವಾಡಿ, ದಸ್ತಗಿರಿ ಕಾಗವಾಡೆ, ಸಜೀವ ಭಾನೆ ಸರ್ಕಾರ, ಸುಕುಮಾರ ಪಾಟೀಲ, ಕುಮಾರ ಬ್ಯಾಡಗಿ ,ಗಿರಗೌಡ ಪಾಟೀಲ, ಗೌಸ ಅಬ್ದಲ ಮೂಲ್ಲಾ, ಶಿಥಲ ಬ್ಯಾಡಗಿ, ಅಣ್ಣಪ್ಪ  ಉಗಾರೆ, ಬರತೇಶ ಬ್ಯಾಡಗಿ, ಸುಭಾಸ ಗಸ್ತಿ , ಭಾಶಾಲಾಲ ರೊಹಿಲ್ಲೆ,  ಪ್ರಸಾದ ಶಿಂಗೆ , ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.//////