Belagavi News In Kannada | News Belgaum

ರಾಮದುರ್ಗ ಜನರ ಪಾಲಿಗೆ ಅದೃಷ್ಟ ಲಕ್ಷ್ಮೀಯಾದ ಲಕ್ಷ್ಮೀ ಹೆಬ್ಬಾಳಕರ್ !

ರಾಮದುರ್ಗ : ರಾಮದುರ್ಗ ತಾಲೂಕಿನಲ್ಲಿ ಚುನಾವಣೆ ಪ್ರಚಾರದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ತಮ್ಮ ಜೊತೆಗೆ ಮಳೆಯನ್ನೂ ತರುವ ಮೂಲಕ ಆ ಭಾಗದ ಜನರ ಪಾಲಿಗೆ ಅದೃಷ್ಟ ಲಕ್ಷ್ಮೀಯಾದರು.
ರಾಮದುರ್ಗ ತಾಲೂಕಿನ ಜನರು ಬಹು ದಿನಗಳಿಂದ ಮಳೆಗಾಗಿ ಕಾದು ಕುಳಿತಿದ್ದರು. ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದರು. ಆದರೆ ಗುರುವಾರ ಸಂಜೆ ಪ್ರತಿ ಊರಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಬರುತ್ತಿದ್ದಂತೆ ಮಳೆಯೂ ಬರುತ್ತಿತ್ತು.
  ತಾಲೂಕಿನ ಮುದೇನೂರ್,  ಬಟಕುರ್ಕಿ, ಸಾಲಾಪೂರ, ಉದುಪುಡಿ ಹಾಗೂ ಕುಳ್ಳೂರ್ ಗ್ರಾಮಗಳಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಪ್ರಚಾರ ನಡೆಸಿದರು. ಅವರು ಹೋದ ಊರಲ್ಲೆಲ್ಲ ಮಳೆಯಾಗುತ್ತಿತ್ತು. ಇದರಿಂದಾಗಿ ಜನರ ಮೊಗದಲ್ಲಿ ಸಂತಸ ಮೂಡಿತು. ಮಳೆಗಾಗಿ ನಾವು ಬಹಳ ದಿನಗಳಿಂದ ಕಾದು ಕುಳಿತಿದ್ದೆವು. ಇಂದು ನಿಮ್ಮ ಜೊತೆಗೆ ಮಳೆಯನ್ನೂ ತಂದಿದ್ದೀರಿ. ನಮ್ಮ ಪಾಲಿನ ಅದೃಷ್ಟ ಇದು ಎಂದು ಜನರು ಕೊಂಡಾಡಿದರು.
ಮಳೆಯ ಮೂಲಕ ನಮ್ಮ ಪಾಲಿಗೆ ಖುಷಿ ತಂದಿದ್ದೀರಿ.  ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಗೆ ಮತ ನೀಡುವ ಮೂಲಕ ನಾವೂ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಜನರು ಅಭಯ ನೀಡಿದರು. /////