Belagavi News In Kannada | News Belgaum

ಒನಕೆ ಓಬವ್ವನ ರೂಪ ತಾಳಿ ಬಂದ ಡಿಕೆ ಶಿ ಪುತ್ರಿ

 ಬೆಂಗಳೂರು: ಕರ್ನಾಟಕ ವೀರ ವನಿತೆಯರಲ್ಲಿ ಒಬ್ಬರೆಂದು ಪರಿಗಣಿಸಲಾಗಿರುವ, ಚಿತ್ರದುರ್ಗದ ಇತಿಹಾಸದಲ್ಲಿ ಅಜರಾಮರವಾಗಿ ಉಳಿದಿರುವ ಹೆಸರು ಒನಕೆ ಓಬವ್ವ. ಇದೀಗ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಶಿವಕುಮಾರ್  ಅವರು ಒನಕೆ ಓಬವ್ವ ಅವರ ವೇಷ ತೊಟ್ಟು ಫೋಟೋಶೂಟ್​​ ಮಾಡಿಕೊಂಡಿದ್ದಾರೆ.

ಇದಲ್ಲದೇ ನಾರಿ ಶಕ್ತಿಯ ಬಗ್ಗೆ ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದು, ಸದ್ಯ ಎಲ್ಲೆಡೆ ವೈರಲ್​​ ಆಗಿದೆ.
ಒನಕೆ ಓಬವ್ವನ ವೇಷ ತೊಟ್ಟು ಫೋಟೋ ಕ್ಲಿಕ್ಕಿಸಿಕೊಂಡಿರುವ ಐಶ್ವರ್ಯ ಸವಿಸ್ತಾರವಾಗಿ ನಾರಿ ಶಕ್ತಿಯ ಬಗ್ಗೆ ಕ್ಯಾಪ್ಷನ್​ ಬರೆದುಕೊಂಡಿದ್ದಾರೆ. “ಹೆಣ್ಣು ಅಬಲೆಯಲ್ಲ, ಎಲ್ಲವನ್ನೂ ಸಾಧಿಸಬಲ್ಲ ಶಕ್ತಿ ಆಕೆಗಿದೆ. ಧೈರ್ಯ, ಸಾಹಸದ ಮೂಲಕ ನಾರಿಶಕ್ತಿಯ ಪ್ರತೀಕವಾಗಿ ಒನಕೆ ಓಬವ್ವ ಅವರು ನಮಗೆ ಸ್ಫೂರ್ತಿಯಾಗಿದ್ದಾರೆ.

‘ಧೈರ್ಯಂ ಸರ್ವತ್ರ ಸಾಧನಂ.’ ಧೈರ್ಯ ಇದ್ದರೆ ಎಂತಹ ಸಮಸ್ಯೆ ಎದುರಾದರೂ ಜಯಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿ ಒನಕೆ ಓಬವ್ವ ಅವರು ಇತಿಹಾಸ ಪುಟದಲ್ಲಿ ಅಜರಾಮರವಾಗಿದ್ದಾರೆ” ಎಂದು ಬರೆದುಕೊಂಡಿದ್ದಾರೆ.//////