Belagavi News In Kannada | News Belgaum

ಬೆಳಗುಂದಿಯಲ್ಲಿ ಬೃಹತ್ ಬೃಹತ್ ಸಮಾವೇಶ

ಜಗದೀಶ್ ಶೆಟ್ಟರ್ ಪರ ಧನಂಜಯ ಜಾಧವ್ ಮತಯಾಚನೆ

 

ಬೆಳಗಾವಿ: ಈ ಹಿಂದೆ ಕಾಶ್ಮೀರದಲ್ಲಿ ಕೇವಲ ಪೈರಿಂಗ್, ದಂಗೆ, ಕಲ್ಲು ಎಸೆವುದು ಆಗುತ್ತಿತು ಆದರೆ, ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ಆರ್ಟಿಕಲ್ 370 ತಗೆದು ಮೇಲೆ ಕಾಶ್ಮೀರದಲ್ಲಿ ಒಂದೆ ಒಂದು ಬಾಂಬ್ ಸ್ಪೋಟ್ ಆಗಿಲ್ಲ, ಹಾಗಾಗಿ ಮತ್ತಮೊಮ್ಮೆ ನರೇಂದ್ರ ಮೋದಿಯವರ ಕೈ ಬಲ ಪಡಿಸಲು ಜಗದೀಶ್ ಶೆಟ್ಟರ್ ಅವರನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸಬೇಕು ಎಂದು ಬಿಜೆಪಿ ಮುಖಂಡ ಧನಂಜಯ್ ಜಾಧವ್ ಅವರು ಕರೆ ನೀಡಿದ್ದಾರೆ.‌

ಲೋಕಸಭಾ ಚುನಾವಣೆ ಅಂಗವಾಗಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಬೆಳಗುಂದಿ ಗ್ರಾಮದಲ್ಲಿ ಪ್ರಚಾರ ಸಭೆ ನಡೆಸಿ, ಮತಯಾಚನೆ ಮಾಡಲಾಯಿತು. ಈ ವೇಳೆ ಮಾತನಾಡಿದ ಅವರು, ಆರ್ಟಿಕಲ್ 370 ಇರುವ ಮುಂಚೆ ಕಾಶ್ಮೀರದಲ್ಲಿ ಗಲಭೆಗಳು ತುಂಬಾ ಆಗುತ್ತಿದ್ದವು. ಆದರೆ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡುವ ಮೂಲಕ ಆತಂಕವಾದಿಗಳಿಗೆ ತಕ್ಕ ಉತ್ತರ ನೀಡಲಾಗಿದೆ.‌ ನಾಲ್ಕು ವರ್ಷ ಆಯ್ತು ಎಲ್ಲಿಯೂ ಬಾಂಬ್ ಸ್ಪೋಟ್ ಆಗಿಲ್ಲ. ನಮ್ಮ ದೇಶದ ಸುರಕ್ಷತೆ ಮೋದಿಯವರ ಕೈಯಲ್ಲಿ ಭದ್ರವಾಗಿದೆ. ಹಾಗಾಗಿ ಮತ್ತೆ ಮೋದಿಯವರು ಪ್ರಧಾನಿ ಆಗಬೇಕು. ಮೋದಿ ಕೈ ಬಲ ಪಡಿಸಲು ಬೆಳಗಾವಿ ಲೋಕಸಭೆಯಿಂದ ಜಗದೀಶ್ ಶೆಟ್ಟರ್ ಅವರನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು

ಜಗದೀಶ್ ಶೆಟ್ಟರ್ ಅವರು ಮಾತನಾಡಿ, ಒಂದು ದೇಶದ ಪ್ರಗತಿಗೆ ಆ ದೇಶದ ಆರ್ಥಿಕತೆ ಬಹಳ ಮುಖ್ಯ ಆಗುತ್ತದೆ‌. ಪ್ರಧಾನಿ ಮೋದಿಯವರು ದೇಶದಲ್ಲಿ ಉತ್ತಮವಾದ ಆರ್ಥಿಕ ನೀತಿ ಜಾರಿಗೆ ತಂದು ದೇಶವನ್ನು ಅಭಿವೃದ್ಧಿ ಮಾಡಿದ್ದಾರೆ.‌ ಅಕ್ಕಪಕ್ಕದ ರಾಷ್ಟ್ರಗಳು ಆರ್ಥಿಕವಾಗಿ ದಿವಾಳಿ ಆಗಿದೆ. ಆದರೆ ಭಾರತ ಆರ್ಥಿಕವಾಗಿ ಬೆಳೆದಿದೆ ಎಂದರೆ ಅದಕ್ಕೆ ಮೋದಿಯವರು ಕಾರಣ ಎಂದಯ ತಿಳಿಸಿದರು.

ಮೋದಿಯವರು 2014 ರಲ್ಲಿ ಪ್ರಧಾನಿ ಆದಾಗ ಭಾರತದ ಆರ್ಥಿಕವಾಗಿ 14 ನೆ ಸ್ಥಾನದಲ್ಲಿ ಇತ್ತು ಆದರೆ ಕೇವಲ 10 ವರ್ಷದಲ್ಲಿ ದೇಶದ ಆರ್ಥಿಕತೆ 5 ನೇ ಸ್ಥಾನಕ್ಕೆ ತಂದಿದ್ದಾರೆ. ಮೋದಿಯವರು ಮತ್ತೆ ಪ್ರಧಾನಿಯಾದರೆ ದೇಶದ ಆರ್ಥಿಕತೆ 3 ನೆ ಸ್ಥಾನಕ್ಕೆ ಬರಲಿದೆ. ಇನ್ನೂ 10-15 ವರ್ಷದಲ್ಲಿ ದೇಶ ಸೂಪರ್ ಪಾವರ್ ಆಗಿ ಆರ್ಥಿಕವಾಗಿ ನಂಬರ್ 1 ಆಗಲಿದೆ.‌ ಹಾಗಾಗಿ ಮೋದಿಯವರು ದೇಶದ ಸುರಕ್ಷತೆಗೆ ಬಹಳ ಅವಶ್ಯಕತೆ ಇದೆ. ಹಾಗಾಗಿ ಮೇ.07 ರಂದು ನಡೆಯುವ ಮತದಾನದ ದಿನದಂದು ಕ್ರ.ಸಂಖ್ಯೆ 02 ರ” ಕಮಲದ ಗುರುತಿಗೆ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಸದೆ ಸಂಸದೆ ಮ.ಮಂಗಳ ಅಂಗಡಿ, ಮಾಜಿ ವಿಧಾನಪರಿಷತ್‌ ಸದಸ್ಯರಾದ ಮಹಾಂತೇಶ ಕವಟಗಿಮಠ, ಪ್ರಮುಖರಾದ ಶಿವಾಜಿ ಸುಂಟಕರ, ಮೋಹನ ಮೋರೆ, ಪ್ರತಾಪ ಸುತಾರ, ಸಂಜಯ ಖುಬಲ, ಹೇಮಾ ಹದಗಲ್, ಭಾಗ್ಯಶ್ರೀ ಕೂಕಿತರಕರ, ಮುಖಂಡರು, ತಾಯಂದಿರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.