Belagavi News In Kannada | News Belgaum

ಚನ್ನರಾಜ ಹಟ್ಟಿಹೊಳಿ ಮತದಾನ ಚಲಾಯಿಸಿದರು

ಬೆಳಗಾವಿ:ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಲೋಕಸಭಾ ಚುನಾವಣೆಯ  ಅಂಗವಾಗಿ ಮೊದಗಾ ಗ್ರಾಮದ ಮತಗಟ್ಟೆಗೆ ತೆರಳಿ, ಮತ ಚಲಾಯಿಸಿದರು.
ಉತ್ತಮ ಹಾಗೂ ಜನಪರ ಆಡಳಿತಕ್ಕಾಗಿ ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡುವಂತೆ ಅವರು ಕೋರಿದ್ದಾರೆ.
ನಂತರ ಸುಳೇಭಾವಿಯ ಆದಿಶಕ್ತಿ ಶ್ರೀ ಮಹಾಲಕ್ಷ್ಮೀ ದೇವಿಯ ಸನ್ನಿಧಿಗೆ ಭೇಟಿ‌ಕೊಟ್ಟು, ದರ್ಶನ ಆಶೀರ್ವಾದ ಪಡೆದು, ನಾಡಿನ ಸುಖ, ಸಮೃದ್ಧಿಗಾಗಿ ಪ್ರಾರ್ಥಿಸಿದರು.