Belagavi News In Kannada | News Belgaum

ಹುಕ್ಕೇರಿ: ಮತಗಟ್ಟೆಯಲ್ಲಿ ಇಬ್ಬರು ಯುವಕರ ಹೊಡೆದಾಟ

ಬೆಳಗಾವಿ: ಮತಗಟ್ಟೆಯಲ್ಲಿ ಇಬ್ಬರು ಯುವಕರ ಹೊಡೆದಾಡಿಕೊಂಡಿರುವ ಘಟನೆ ಹುಕ್ಕೇರಿ ತಾಲೂಕಿನ ಎಲಿಮುನ್ನೂಳ್ಳಿ ಗ್ರಾಮದಲ್ಲಿ ನಡೆದಿದೆ.

ಹುಕ್ಕೇರಿ ತಾಲೂಕಿನ ಎಲಿಮುನ್ನೂಳ್ಳಿ ಗ್ರಾಮದ ಸರಕಾರಿ ಹೆಣ್ಣು ಮಕ್ಕಳ ಶಾಲೆಯ ಮತಗಟ್ಟೆಯಲ್ಲಿ ಮಹಿಳೆಯರು ಮತ್ತು ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸರದಿ ಸಾಲಿನಲ್ಲಿ ನಿಂತಾಗ ಮಾತಿಗೆ ಮಾತು ಬೆಳೆದು ಇಬ್ಬರು ಯುವಕರು ಹೊಡೆದಾಡಿಕೊಂಡಿದ್ದಾರೆ..

ಗ್ರಾಮದ ಸರಕಾರಿ ಶಾಲೆಯಲ್ಲಿ ಇಕ್ಕಟ್ಟಿನ ಸ್ಥಳದಲ್ಲಿ ಮತಗಟ್ಟೆ ಸ್ಥಾಪಿಸಿದ್ದರಿಂದ ಮತದಾರರಿಗೆ ನಿಲ್ಲಲು ಸಹ ಸ್ಥಳ ಇಲ್ಲವಾದ್ದರಿಂದ ನೂಕು ನುಗ್ಗಲಿನಲ್ಲಿ ಇಬ್ಬರು ಯುವಕರು ರಕ್ತ ಬರುವ ಹಾಗೆ ಹೋಡೆದಾಡಿದ್ದಾರೆ ಪೋಲಿಸರು ಮದ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.