Belagavi News In Kannada | News Belgaum

ಜೈಲಿನಿಂದ ಹೊರಬರುತ್ತಿದ್ದಂತೆ ರೇವಣ್ಣ ಟೆಂಪಲ್‌ ರನ್‌!

ಬೆಂಗಳೂರು: ಅಪಹರಣ ಪ್ರಕರಣದಲ್ಲಿ ಶಾಸಕ, ಮಾಜಿ ಸಚಿವ ಹೆಚ್‌ಡಿ ರೇವಣ್ಣಗೆ ಜಾಮೀನು ಸಿಕ್ಕಿದ ಬೆನ್ನಲ್ಲೇ ದೇಗುಲ ಯಾತ್ರೆ ಆರಂಭಿಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಿಂದ ನೇರವಾಗಿ ಪದ್ಮನಾಭ ನಗರದಲ್ಲಿರುವ ಮಾಜಿ ಪ್ರಧಾನಿ ದೇವೇಗೌಡರ ನಿವಾಸಕ್ಕೆ ಆಗಮಿಸಿ ದೇವರ ಕೋಣೆಯಲ್ಲಿ ಪೂಜೆ ಮಾಡಿದರು.

ನಂತರ ರೇವಣ್ಣ ಬೆಂಗಳೂರಿನ ಜೆಪಿ ನಗರದಲ್ಲಿರುವ ತಿರುಮಲ ಲಕ್ಷ್ಮಿ ವೆಂಕಟೇಶ್ವರ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆಯಲ್ಲಿ ಭಾಗಿಯಾಗಿದರು. ದೇವಾಲಯದಲ್ಲಿ ಕುಂಬಳಕಾಯಿ, ಈಡುಗಾಯಿ ದೃಷ್ಟಿ ತೆಗೆಸಿ ರೇವಣ್ಣ ಒಬ್ಬರೇ ಪೂಜೆ ಮಾಡಿದರು. ಇಲ್ಲಿಂದ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಳೆ ಶೃಂಗೇರಿಗೆ ರೇವಣ್ಣ ಭೇಟಿ ನೀಡುವ ಸಾಧ್ಯತೆಯಿದೆ.

ಜೈಲಿನಿಂದ ರಿಲೀಸ್‌ ಆಗಿರುವ ಮಾಜಿ ಸಚಿವ ಹೆಚ್‌.ಡಿ ರೇವಣ್ಣಅವರು ನೇರವಾಗಿ ಪದ್ಮನಾಭನಗರದಲ್ಲಿರುವ ದೇವೆಗೌಡರ ನಿವಾಸಕ್ಕೆ ತೆರಳಿದ್ದಾರೆ. ಅಲ್ಲಿ ತಂದೆ-ತಾಯಿ ಜೊತೆ ಮಾತನಾಡಿ ಹೊರಡುವ ಸಂದರ್ಭದಲ್ಲಿ ರೇವಣ್ಣ ಅವರು ದೇವೇಗೌಡರ ನಿವಾಸದ ಎದುರು ಕಾರ್ಯಕರ್ತರನ್ನು ಭೇಟಿಯಾದರು.

ನೆರೆದಿದ್ದ ಕಾರ್ಯಕರ್ತರನ್ನು ಕಂಡು ಕಣ್ಣೀರು ಹಾಕಿದ ರೇವಣ್ಣ ಅವರನ್ನು ಸಮಾಧಾನಪಡಿಸಿದರು. ನೀವು ಅಳಬೇಡಿ ಕಣಣ್ಣ ಎಂದು ಡಿಕೆಶಿ ವಿರುದ್ಧ ಕಾರ್ಯಕರ್ತರು ಕಿಡಿಕಾರಿದರು.

ಈ ವೇಳೆ ರೇವಣ್ಣ ಅವರು, ಹಂಗೆಲ್ಲ ಮಾತನಾಡಬಾರದು ಅಂದಾಗ ಯಾಕಣ್ಣ ಮಾತಾಡಬಾರದು ಎಂದು ಕಾರ್ಯಕರ್ತರು ರೊಚ್ಚಿಗೆದ್ದರು. ರೇವಣ್ಣ ಜೊತೆ ಕೆಲ ಕಾರ್ಯಕರ್ತರು ಕೂಡ ಕಣ್ಣೀರು ಹಾಕಿದ್ದಾರೆ. ಬಳಿಕ ಅಲ್ಲಿಂದ ತೆರಳಿದರು