Belagavi News In Kannada | News Belgaum

ಶ್ರೀ ಭಗೀರಥ ಜಯಂತಿಯ ಆಚರಣೆ


ಬೆಳಗಾವಿ.ಮೇ.14 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬೆಳಗಾವಿಯ ಕುಮಾರ ಗಂಧರ್ವ ರಂಗಮಂದಿರದಲ್ಲಿ ಮಂಗಳವಾರ (ಮೇ 14) ಕೈಲಾಸದಿಂದ ದೇವಗಂಗೆಯನ್ನು ಧರೆಗೆ ತಂದ ಮಹಾತಪಸ್ವಿ ಮಹರ್ಷಿ ಶ್ರೀ ಭಗೀರಥ ಜಯಂತಿಯನ್ನು ಚುನಾವಣಾ ನೀತಿ ಸಂಹಿತೆಯ ಜಾರಿ ಇರುವುದರಿಂದ ಸರಳವಾಗಿ ಆಚರಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಉಪ್ಪಾರ ಸಮಾಜದ ಜಿಲ್ಲಾ ಅಧ್ಯಕ್ಷ ಜಿ. ಎಸ್.ಉಪ್ಪಾರ, ಕಾರ್ಯದರ್ಶಿ ಬಿ.ಪಿ.ಮೇಲ್ಮಟ್ಟಿ, ಮುಖಂಡರಾದ ನ್ಯಾಯವಾದಿ ಎನ್.ಆರ್.ಲಾತೂರ, ಮಂಜುನಾಥ ರಾಜಪ್ಪಗೋಳ, ಬಾಲರಾಜ ಮಾಳೆಪ್ಪಗೋಳ, ವಿನಾಯಕ ಮದಲಭಾವಿ, ಸಂತೋಷ ಉಪ್ಪಾರ, ರಾಜು ದಳವಾಯಿ, ಲಕ್ಷ್ಮಿ ಗೋಟೂರ, ಅನಂತ ಕುಮಾರ್ ಬ್ಯಾಕೂಡ, ಮಂಜುನಾಥ್ ರಾಜಪ್ಪನವರ್, ಎನ್.ಆರ್.ಲಾತೂರ್, ಸುಭಾಷ್ ಪೂಜಾರಿ, ಬಿ.ಪಿ. ಮೇಲ್ಮಟ್ಟಿ, ಮೋಹನ್ ಲಾತೂರ್, ರೇಖಾ ಲಕ್ಕುಂಡಿ, ಲಕ್ಷ್ಮಿ ಗೋಟೂರ ಹಾಗೂ ಸಮಾಜದ ಮುಖಂಡರು, ಗಣ್ಯರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.