Belagavi News In Kannada | News Belgaum

ನೀರು ಸರಬರಾಜುವಿನಲ್ಲಿ ವ್ಯತ್ಯಯ

ಬೆಳಗಾವಿ.ಮೇ.14 : ಗುಡುಗು ಸಹಿತ ಭಾರಿ ಮಳೆಯಿಂದಾಗಿ ಗುರುದೇವ ಮಂದಿರ ಹಿಂದವಾಡಿ ಹತ್ತಿರ, 450 ಎಂಎಂ ವ್ಯಾಸದ ಪೈಪಲೈನ್ ಒಡೆದು (ಲಕ್ಷ್ಮಿಟೆಕ್‍ದಿಂದ ಗುಮ್ಮಟಮಾಳವರೆಗೆ) ತುರ್ತು ದುರಸ್ಥಿ ಕೈಗೊಂಡಿರುವ ಕಾರಣ ಮೇ.14 ರಿಂದ 18 ರವರೆಗೆ ಬೆಳಗಾವಿ ದಕ್ಷಿಣ ಭಾಗಕ್ಕೆ ಕಡಿಮೆ ಒತ್ತಡದಲ್ಲಿ ನೀರು ಸರಬರಾಜು ಮಾಡಲಾಗುವುದು.
ಬೆಳಗಾವಿ ದಕ್ಷಿಣ ಪ್ರದೇಶಗಳಾದ ಮಜಗಾಂವ, ರಾಜಾರಾಮನಗರ, ಆರ್. ಸಿ ನಗರ ಮೊದಲನೆ ಮತ್ತು ಎರಡನೇ ಹಂತ, ಮತ್ತು ಅದರ ಉಪ ಭಾಗಗಳು, ಯಾದವ ಕಾಲೋನಿ, ಗಜಾನನ ನಗರ, ಚಿದಂಬರ ನಗರ, ಮೃತ್ಯುಂಜಯ ನಗರ, ಅನಗೋಳ, ವಡಗಾವಿ, ಹಳೇಬೆಳಗಾವಿ, ಹಿಂದವಾಡಿ, ಓಂಕಾರ ನಗರ, ಪಾರಿಜಾತ ಕಾಲೋನಿ, ದಕ್ಷಿಣ ಪ್ರಾತ್ಯಕ್ಷಿಕ ವಲಯ, ಶಹಾಪೂರ, ಭರತ ನಗರ, ನಾನಾವಾಡಿ, ಟಿಳಕವಾಡಿ, ಶಾಸ್ತ್ರಿ ನಗರ, ಮತ್ತು ಸಮರ್ಥನಗರದಲ್ಲಿ ಕಡಿಮೆ ನೀರು ಸರಬರಾಜು ಮಾಡಲಾಗುವುದು ಎಂದು ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.