Belagavi News In Kannada | News Belgaum

ಕಾರಾಗೃಹದ ಅಧಿಕಾರಿ / ಸಿಬ್ಬಂದಿಗಳಿಗೆ “ಮಹಿಳಾ ಆಂತರಿಕ ದೂರು ನಿವಾರಣಾ ಸಮಿತಿ ಪುನರ್ POSH ACT

ರಚಿಸುವ ಹಾಗೂ POSH ACT – 2013 ಕುರಿತು ಒಂದು ದಿನದ ತರಬೇತಿ”

ಕಾರಾಗೃಹದ ಅಧಿಕಾರಿ / ಸಿಬ್ಬಂದಿಗಳಿಗೆ “ಮಹಿಳಾ ಆಂತರಿಕ ದೂರು ನಿವಾರಣಾ ಸಮಿತಿ ಪುನರ್
ರಚಿಸುವ ಹಾಗೂ POSH ACT – 2013 ಕುರಿತು ಒಂದು ದಿನದ ತರಬೇತಿ”

ದಿನಾಂಕ: 13/05/2024 ರಂದು ಕೇಂದ್ರ ಕಾರಾಗೃಹ ಬೆಳಗಾವಿಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ “ಮಹಿಳಾ ಆಂತರಿಕ ದೂರು ನಿವಾರಣಾ ಸಮಿತಿ ಪುನರ್ ರಚಿಸುವ ಹಾಗೂ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಗಟ್ಟುವ, ನಿಷೇದ ಮತ್ತು ಪರಿಹಾರ ಕಾಯಿದೆ-2013, ಕುರಿತು ಒಂದು ದಿನದ ತರಬೇತಿ ಆಯೋಜಿಸಲಾಗಿತ್ತು. ಸದರಿ ಕಾರ್ಯಕ್ರಮವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ ಹಾಗೂ ಕೇಂದ್ರ ಕಾರಾಗೃಹ ಬೆಳಗಾವಿ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀಮತಿ ಸುಮಿತ್ರಾ ಡಿ.ಬಿ. ಹಾಗೂ ಉಪನ್ಯಾಸಕರಾಗಿ ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿಯ ಯೋಜನಾ ನಿರ್ದೇಶಕರಾದ ಶ್ರೀಮತಿ ಸುರೇಖಾ ಪಾಟೀಲ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಕಾರಾಗೃಹದ ಅಧೀಕ್ಷಕರಾದ ಶ್ರೀ ವಿಜಯ ರೋಡಕರ ವಹಿಸಿದ್ದರು.

ಕಾರ್ಯಕ್ರಮವನ್ನು ಸಸಿಗೆ ನೀರೂಣಿಸುವ ಮೂಲಕ ಉದ್ಘಾಟಿಸಲಾಯಿತು. ಶ್ರೀಮತಿ ಸುಮಿತ್ರಾ ಡಿ.ಬಿ. ತರಬೇತಿ ಕುರಿತು ಮಾತನಾಡಿ ಮಹಿಳೆಯರಿಗಾಗಿ ಹಾಗೂ ಮಕ್ಕಳ ಸುರಕ್ಷತೆಗಾಗಿ ಅನೇಕ ಕಾಯಿದೆ, ಕಾನೂನುಗಳಿದ್ದು, ಮಗು ತಾಯಿಯ ಗರ್ಭದಲ್ಲಿ ಇರುವುದಾಗಿನಿಂದ ಮುಪ್ಪಿನವರೆಗೂ ಮಹಿಳೆಯ ಹಕ್ಕುಗಳನ್ನು ರಕ್ಷಿಸುವಲ್ಲಿ ಈ ಕಾನೂನುಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಸರ್ಕಾರಿ ಹಾಗೂ ಸರ್ಕಾರೇತರ ಕಾರ್ಯಲಯಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಆಂತರಿಕ ದೂರು ನಿವಾರಣಾ ಸಮಿತಿ, ಇರುವುದು ಕಡ್ಡಾಯವಾಗಿದೆ ಎಂದು ಹೇಳಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ಶ್ರೀಮತಿ ಸುರೇಖಾ ಪಾಟೀಲ ಮಾತನಾಡಿ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟಲು 2013 ರಲ್ಲಿ PಔSಊ ಂಅಖಿ – 2013 ಕಾನೂನು ಜಾರಿಗೆ ಬಂದಿರುತ್ತದೆ. ಅಲ್ಲದೇ ಮಹಿಳೆಯರಿಗಾಗಿ ಆಂತರಿಕ ದೂರು ನಿವಾರಣಾ ಸಮಿತಿ, ಉದ್ದೇಶಗಳ ಮತ್ತು ಕಾರ್ಯಗಳ ಬಗ್ಗೆ ವಿಡಿಯೋಗಳ ಮೂಲಕ ಸಮಗ್ರ ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ವಿಜಯ ರೋಡಕರ ಮಾತನಾಡಿ ಭಾರತ ದೇಶದಲ್ಲಿ ಮಹಿಳೆಯರಿಗೆ ಅತ್ಯುನ್ನತ ಸ್ಥಾನವಿದ್ದು, ಇಡೀ ಪ್ರಪಂಚದಲ್ಲಿ ನಮ್ಮ ದೇಶದ ಸಂಸ್ಕøತಿ ಅತ್ಯಂತ ಉನ್ನತ ಸ್ಥಾನದಲ್ಲಿದೆ. ಕಾರಣ, ನಾವೆಲ್ಲ ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳಿಗಾಗಿರುವ ವಿವಿಧ ಕಾಯ್ದೆಗಳ ಬಗ್ಗೆ ಮಾಹಿತಿ ಪಡೆಯಬೇಕು. ಕೇವಲ ಕೆಲಸ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಅಲ್ಲದೇ ಸಮಾಜದ ಯಾವುದೇ ಕ್ಷೇತ್ರದಲ್ಲಿ ಆದರು ಲೈಂಗಿಕ ಕಿರುಕಳ ಆಗದಂತೆ ತಡೆಯಬೇಕಾಗಿದೆ. ಕಾರಣ, ಸರ್ವ ಸಿಬ್ಬಂದಿಯವರು ಈ ತರಬೇತಿಯ ಸದುಪಯೋಗ ಪಡೆದು ತಮ್ಮ ಕುಟುಂಬದ ಸದಸ್ಯರಿಗೆ ಹಾಗೂ ಇತರರಿಗೆ ಈ ಕಾಯ್ದೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸುಮಾರು 100 ಜನ ಕಾರಾಗೃಹ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು. ವೇದಿಕೆಯ ಮೇಲೆ ಸಹಾಯಕ ಅಧೀಕ್ಷಕರುಗಳಾದ ಶ್ರೀ ವಿ. ಕೃಷ್ಣ ಮೂರ್ತಿ, ಶ್ರೀ ಮಲ್ಲಿಕಾರ್ಜುನ ಕೊಣ್ಣುರ, ಹಾಗೂ ಆಡಳಿತಾಧಿಕಾರಿಗಳಾದ ಶ್ರೀ. ಬಿ.ಎಸ್. ಪೂಜಾರಿ, ಉಪಸ್ಥಿತರಿದ್ದರು. ಕಾರಾಗೃಹದ ಉಪಾದ್ಯಾಯರಾದ ಶ್ರೀ. ಶಶಿಕಾಂತ ಯಾದಗುಡೆ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.