Belagavi News In Kannada | News Belgaum

ಬೆಳಗಾವಿಯ ಚಿದಂಬರ ನಗರದಲ್ಲಿ 24ಘಿ7 ನಳ ಸಂಪರ್ಕ ಪಡೆಯಲು ದಾಖಲಾತಿ ಸಂಗ್ರಹ ಅಭಿಯಾನ

ಬೆಳಗಾವಿ: ಬೆಳಗಾವಿ ದಕ್ಷಿಣ ವಲಯದ ಚಿದಂಬರ ನಗರದಲ್ಲಿ 24×7 ನಳ ಸಂಪರ್ಕ ಪಡೆಯಲು ದಾಖಲಾತಿ ಸಂಗ್ರಹ ಅಭಿಯಾನವನ್ನು ಚಿದಂಬರ ದೇವಸ್ಥಾನದಲ್ಲಿ ಇತ್ತೀಚೆಗೆ (13-5-2024 ರಂದು) ಕೆಯುಐಡಿಎಫ್‍ಸಿ ಯೋಜನಾ ಅನುಷ್ಠಾನ ಘಟಕ, ಅಡವಿ ಸಿದ್ದೇಶ್ವರ ನೆರವು ಸಂಸ್ಥೆ, ಎಲ್ &ಟಿ ಯೋಜನಾ ನಿರ್ವಾಹಕರ ಸಂಯುಕ್ತ ಆಶ್ರಯದಲ್ಲಿ ದಾಖಲಾತಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಇದಕ್ಕೂ ಪೂರ್ವದಲ್ಲಿ, ನೆರವು ಸಂಸ್ಥೆಯ ಸಿಬ್ಬಂದಿಗಳು ಚಿದಂಬರ ನಗರದ ಪ್ರತಿ ಮನೆ ಮನೆಗೂ ಭೇಟಿ ನೀಡಿ, ಅವರ ಮನೆಗೆ 24×7 ನಳಸಂಪರ್ಕ ಪಡೆಯಲು ಅವಶ್ಯಕವಿರುವ ದಾಖಲಾತಿಗಳಾದ, ಆಧಾರ ಕಾರ್ಡ, ಇತ್ತೀಚಿನ ನೀರಿನ ದರ ಪಾವತಿಸಿದ ರಶೀದಿ, 100 ರೂಗಳ ಬಾಂಡ್ ಪೇಪರ, 2 ಪಾಸ್‍ಪೋರ್ಟ ಸೈಜ ಫೋಟೋ ಗಳನ್ನು ಒಂದು ಪೈಲಿನಲ್ಲಿ ದಿನಾಂಕ 13-5-2024 ರಂದು ನಡೆಸುವ ದಾಖಲಾತಿ ಅಭಿಯಾನದಲ್ಲಿ ಸಲ್ಲಿಸಲು ತಿಳಿಸಲಾಗಿತ್ತು.

ದಿನಾಂಕ 13-5-2024 ರ ಬೆಳಿಗ್ಗೆ 10-00 ರಿಂದ ಸಂಜೆ 5-30 ರವರಗೆ ಚಿದಂ¨ರ ನಗರದ ನಿವಾಸಿಗಳೆಲ್ಲ ಬಂದು ತಮ್ಮ ತಮ್ಮ ದಾಖಲಾತಿಗಳನ್ನು ಸಲ್ಲಿಸಿದರು. ಇದರಲ್ಲಿ ಹೆಸರು ಬದಲಾವಣೆ ಕೋರಿ ಹಲವಾರು ಜನರು ಅರ್ಜಿ ಸಲ್ಲಿಸಿದರು. ಒಟ್ಟು 315 ಜನರು ಅರ್ಜಿ ಸಲ್ಲಿಸಿದರು. ಅಲ್ಲದೇ 38 ಜನರು ನೀರಿನ ಕರ ಪಾವತಿಸಿದರು. ಒಟ್ಟು 57064/-ರೂಗಳನ್ನು ಕೂಡ ಸಂಗ್ರಹಿಸಲಾಯಿತು.ಈ ಅಭಿಯಾನದಿಂದ ನಮಗೆ ಕಚೇರಿ ಅಲೆಯುವುದು ತಪ್ಪಿತು. ಕಚೇರಿಯೇ ನಮ್ಮ ಮನೆ ಬಾಗಿಲಿಗೆ ಬಂದು ನಮ್ಮ ಸಮಸ್ಯೆಗಳನ್ನು ನಿವಾರಿಸಿದಂತಾಯಿತು ಮತ್ತು ಸ್ಥಳದಲ್ಲಿಯೇ ಬಾಂಡ್ ಪೇಪರ ಪ್ರಿಂಟ್ ಮಾಡಿ ಕೊಟ್ಟಿದ್ದು ತುಂಬಾ ಒಳ್ಳೆಯದಾಯಿತು ಎಂದು ಚಿದಂಬರ ನಗರದ ನಿವಾಸಿಗಳು ಸಂತಸ ವ್ಯಕ್ತ ಪಡಿಸಿದರು.
ಅಭಿಯಾನದಲ್ಲಿ ಕೆಯುಐಡಿಎಫ್‍ಸಿ ಯೋಜನಾ ಅನುಷ್ಠಾನ ಘಟಕದ ಅಧೀಕ್ಷಕ ಅಭಿಯಂತರರಾದ ಅಶೋಕ ಬುರಕುಲೆ, ಶಶಿಕುಮಾರ ಹತ್ತಿ, ಉಮೇಶ ನಿಟ್ಟೂರಕರ, ಶ್ರೀಮತಿ ಸೌಮ್ಯ, ಪ್ರಕಾಶ ಕೋಷ್ಠಿ, ಸಂತೋಷ ಕಾವಿ, ಶ್ರೀಮತಿ ಪದ್ಮಜಾ ನಾಡಗೌಡ, ನೆರವು ಸಂಸ್ಥೆಯ ತಂಡದ ಶ್ರೀಮತಿ ಚಂದ್ರಲೇಖ ಮಾನು ಮತ್ತು ಸಿಬ್ಬಂದಿಗಳು, ಎಲ್&ಟಿ ಯ ಸಾಮಾಜಿಕ ತಂಡದ ದೊಡ್ಟಮನಿ, ಕೆ. ಭೀಮಪ್ಪ, ಇಬ್ರಾಹಿಂ ರವರು ಉಪಸ್ಥಿತರಿದ್ದು ಸಾರ್ವಜನಿಕರಿಗೆ ಸೂಕ್ತ ಮಾರ್ಗದರ್ಶನ ನೀಡಿದರು.