Belagavi News In Kannada | News Belgaum

ಹುಬ್ಬಳ್ಳಿಯಲ್ಲಿಜಾವಾಯೆಜ್ಡಿಮೋಟಾರ್ಸೈಕಲ್ಸ್ಮೆಗಾಸೇವಾಶಿಬಿರ

ಎರಡು ದಿನಗಳ ಸೇವಾ ಶಿಬಿರ ಮೇ 17 ರಿಂದ ಮೇ 18 ರವರೆಗೆ ನಡೆಯಲಿದ್ದು, ನಗರದಲ್ಲಿ 2019-2020 ರ ಜಾವಾ ಗ್ರಾಹಕರಿಗೆ ಸೇವೆ ಸಲ್ಲಿಸುವ ಗುರಿ

ಹುಬ್ಬಳ್ಳಿಯಲ್ಲಿ ಜಾವಾ ಯೆಜ್ಡಿ ಮೋಟಾರ್ ಸೈಕಲ್ಸ್ ಮೆಗಾ ಸೇವಾ ಶಿಬಿರ
* ಎರಡು ದಿನಗಳ ಸೇವಾ ಶಿಬಿರ ಮೇ 17 ರಿಂದ ಮೇ 18 ರವರೆಗೆ ನಡೆಯಲಿದ್ದು, ನಗರದಲ್ಲಿ 2019-2020 ರ ಜಾವಾ ಗ್ರಾಹಕರಿಗೆ ಸೇವೆ ಸಲ್ಲಿಸುವ ಗುರಿಯನ್ನು ಹೊಂದಿದೆ.
* ಗ್ರಾಹಕರಿಗೆ ಸಹಾಯ ಮಾಡಲು, ಪ್ರಮುಖ ಮೂಲ ಉಪಕರಣ ತಯಾರಕರು ಸಹ ಶಿಬಿರದಲ್ಲಿ ಉಪಸ್ಥಿತರಿರುತ್ತಾರೆ.

ಹುಬ್ಬಳ್ಳಿ, ಮೇ 16, 2024: ಜಾವಾ ಯೆಜ್ಡಿ ಮೋಟಾರ್‍ಸೈಕಲ್ಸ್ ತನ್ನ ಅತ್ಯಂತ ಯಶಸ್ವಿ ಮೆಗಾ ಸೇವಾ ಶಿಬಿರವನ್ನು ಕರ್ನಾಟಕದ ಹುಬ್ಬಳ್ಳಿಗೆ ವಿಸ್ತರಿಸಲು ಸಜ್ಜಾಗಿದೆ.

ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಒಂದನೇ ಹಂತದ ಯಶಸ್ವಿ ಸೇವಾ ಶಿಬಿರಗಳ ನಂತರ, 2ನೇ ಹಂತದ ಸೇವಾ ಶಿಬಿರಗಳನ್ನು ಮತ್ತಷ್ಟು ನಗರಗಳಿಗೆ ವಿಸ್ತರಿಸುತ್ತದೆ. ಈ ಕಾರ್ಯಕ್ರಮವು ಮೇ 17 ರಿಂದ ಮೇ 18 ರವರೆಗೆ ಹುಬ್ಬಳ್ಳಿಯಲ್ಲಿ ನಡೆಯಲಿದ್ದು, ಈ ಪ್ರದೇಶದಲ್ಲಿ 2019 ಮತ್ತು 2020 ರ ಮಾಡೆಲ್ ಜಾವಾ ಮೋಟಾರ್‍ಸೈಕಲ್ ಮಾಲೀಕರಿಗೆ ವಿಶೇಷವಾಗಿ ಸೇವೆ ಒದಗಿಸಲಿದೆ.
ಸೇವಾ ಶಿಬಿರವು ಇಲ್ಲಿ ನಡೆಯಲಿದೆ:
ಆಟೋಮೊಬೈಲ್- LLP, KSRTC ಡಿಪೋ ಎದುರು, ಚಿಂದಿ ಕಟ್ಟಡ, ಗೋಕುಲ್ ರಸ್ತೆ, ಹುಬ್ಬಳ್ಳಿ, ಧಾರವಾಡ, ಕರ್ನಾಟಕ – 580030

ಶಿಬಿರದ ಅಂಗವಾಗಿ, 2019-2020 ರ ಜಾವಾ ಮೋಟಾರ್‍ಸೈಕಲ್‍ಗಳ ಮಾಲೀಕರು ಸಮಗ್ರ ವಾಹನ ಆರೋಗ್ಯ ತಪಾಸಣೆ ಮತ್ತು ಆಯ್ದ ಭಾಗಗಳ ಉಚಿತ ಬದಲಾವಣೆಗೆ ಅರ್ಹರಾಗಿರುತ್ತಾರೆ. ಮೊಟುಲ್, ಅಮರಾನ್ ಮತ್ತು ಸಿಯೆಟ್ ಟೈರ್ಸ್ ಸೇರಿದಂತೆ ಪ್ರಮುಖ ಮೂಲ ಸಾಧನ, ಸಲಕರಣೆ ಪೂರೈಕೆದಾರರು ಗ್ರಾಹಕರಿಗೆ ಸಹಾಯ ಮಾಡಲು ಸಕ್ರಿಯವಾಗಿ ಈ ಶಿಬಿರದಲ್ಲಿ ಭಾಗವಹಿಸುತ್ತಾರೆ.

ದೀರ್ಘಾವಧಿಯ ಗ್ರಾಹಕರ ತೃಪ್ತಿಗೆ ನಿರಂತರವಾಗಿ ಬದ್ಧವಾಗಿರುವ ಜಾವಾ ಯೆಜ್ಡಿ ಮೋಟಾರ್‍ಸೈಕಲ್ಸ್, ಮೋಟಾರ್ ಸೈಕಲ್‍ಗಳ ಆರೋಗ್ಯ ಮೌಲ್ಯಮಾಪನದ ಆಧಾರದ ಮೇಲೆ ಪೂರಕ ವಿಸ್ತøತ ವಾರಂಟಿಗಳನ್ನು ನೀಡುತ್ತಿದೆ. ಹೆಚ್ಚುವರಿಯಾಗಿ, ವಿನಿಮಯ ಮೌಲ್ಯವನ್ನು ನಿರ್ಣಯಿಸಲು ತಮ್ಮ ಮೋಟಾರ್ ಸೈಕಲ್‍ಗಳನ್ನು ನವೀಕರಿಸಲು ಆಸಕ್ತಿ ಹೊಂದಿರುವ ಮಾಲೀಕರಿಗೆ ಗೊತ್ತುಪಡಿಸಿದ ವಲಯವನ್ನು ಸ್ಥಾಪಿಸಲಾಗುತ್ತದೆ.

ಈಗಾಗಲೇ 6250 ಜಾವಾ ಮೋಟಾರ್‍ಸೈಕಲ್‍ಗಳಿಗೆ ಸೇವೆ ಒದಗಿಸಿರುವ 1ನೇ ಹಂತದ ಸೇವಾ ಶಿಬಿರಗಳ ಯಶಸ್ಸಿನ ಮೇಲೆ ಜಾವಾ ಜೂನ್ ಅಂತ್ಯದ ವೇಳೆಗೆ ಸುಮಾರು 10,000 ಬೈಕ್‍ಗಳಿಗೆ ಸೇವೆ ಸಲ್ಲಿಸುವ ಗುರಿ ಹಾಕಿಕೊಂಡಿದೆ. ಇದರ ಜತೆಗೆ ಜಾವಾ ಮುಂಬರುವ ತಿಂಗಳುಗಳಲ್ಲಿ ದೇಶದಾದ್ಯಂತ ಬಹು ನಗರಗಳಲ್ಲಿ ಮೆಗಾ ಸೇವಾ ಶಿಬಿರಗಳನ್ನು (ಹಂತ 2) ಆಯೋಜಿಸುತ್ತದೆ.

ಮುಂದಿನ ಶಿಬಿರವನ್ನು ತಿರುಪತಿ, ಮೈಸೂರು, ರಾಯಪುರ, ರಾಂಚಿ, ನಾಗರ್‍ಕೋಯಿಲ್, ಭುವನೇಶ್ವರ, ಹುಬ್ಬಳ್ಳಿ, ಪಾಟ್ನಾ ಮತ್ತು ನಾಸಿಕ್‍ನಲ್ಲಿ ಆಯೋಜಿಸಲಾಗಿದೆ. ಈ ಉಪಕ್ರಮವು ಗ್ರಾಹಕರ ತೃಪ್ತಿಗೆ ಆದ್ಯತೆ ನೀಡಲು ಮತ್ತು ಸಾಟಿಯಿಲ್ಲದ ಮಾಲೀಕತ್ವದ ಅನುಭವವನ್ನು ಒದಗಿಸಲು ಬ್ರ್ಯಾಂಡ್‍ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ.

ಜಾವಾ ಎಜ್ಡಿ ಮೋಟಾರ್‍ಸೈಕಲ್‍ಗಳ ಮಾಲೀಕರು ತಮ್ಮ ಸಮಯವನ್ನು ಹತ್ತಿರದ ಬ್ರ್ಯಾಂಡ್ ಡೀಲರ್‍ಶಿಪ್‍ನಲ್ಲಿ ಕಾಯ್ದಿರಿಸುವಂತೆ ಕೋರಲಾಗುತ್ತಿದೆ. ನಿಮ್ಮ ಮೋಟಾರ್‍ಸೈಕಲ್ ಉನ್ನತ ದರ್ಜೆಯ ಆರೈಕೆಯನ್ನು ಪಡೆಯುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವ
ಅವಕಾಶವನ್ನು ಕಳೆದುಕೊಳ್ಳಬೇಡಿ ಮತ್ತು ಗ್ರಾಹಕರ ತೃಪ್ತಿ ಬದ್ಧತೆಯನ್ನು ನೇರವಾಗಿ ಅನುಭವಿಸಿ.///