Belagavi News In Kannada | News Belgaum

ಕರ್ನಾಟಕ ವಿಧಾನ ಪರಿಷತ್​ನ 11 ಸ್ಥಾನಗಳಿಗೆ ಚುನಾವಣೆ ಘೋಷಣೆ

 

ಕರ್ನಾಟಕ ವಿಧಾನಸಭೆಯಿಂದ  ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ವಿಧಾನಸಭೆಯಿಂದ ವಿಧಾನಪರಿಷತ್​ಗೆ ಆಯ್ಕೆಯಾಗಿರುವ 11 ಸದಸ್ಯರ ಅಧಿಕಾರವಾಧಿ ಜೂನ್ 17ಕ್ಕೆ ಮುಕ್ತಾಯವಾಗಲಿದೆ.

ಹೀಗಾಗಿ ಇಂದು(ಮೇ 20) ಕೇಂದ್ರ ಚುನಾವಣೆ ಆಯೋಗವು ಕರ್ನಾಟಕ ಮೇಲ್ಮನೆಯ 11 ಸ್ಥಾನಗಳಿಗೆ ಚುನಾವಣೆ ದಿನಾಂಕ ಘೋಷಣೆ ಮಾಡಿದ್ದು, ಜೂನ್ 13ರಂದು ಮತದಾನ ನಡೆಯಲಿದೆ. ಇನ್ನು ಅಂದೇ (ಜೂನ್ 13) ಫಲಿತಾಂಶ ಪ್ರಕಟವಾಗಲಿದೆ.