Belagavi News In Kannada | News Belgaum

ಹೆಚ್.ಡಿ ರೇವಣ್ಣಗೆ ಬಿಗ್ ರಿಲೀಫ್

ಬೆಂಗಳೂರು: ಮಾಜಿ ಸಚಿವ ಹೆಚ್​.ಡಿ ರೇವಣ್ಣ ಅವರಿಗೆ 42ನೇ ಎಸಿಎಂಎಂ ಕೋರ್ಟ್​ ಜಾಮೀನು ಮಂಜೂರು ಮಾಡಿದೆ. ಮಧ್ಯಂತರ ಜಾಮೀನು ಪಡೆದು ಹೊರಗಿದ್ದ ರೇವಣ್ಣ ಅವರಿಗೆ ಕೋರ್ಟ್​ ಈ ತೀರ್ಪು ಬಿಗ್ ರಿಲೀಫ್ ನೀಡಿದೆ.  5 ಲಕ್ಷ ರೂಪಾಯಿಗಳ ಬಾಂಡ್ ಹಾಗೂ ಒಬ್ಬರ ಶ್ಯೂರಿಟಿಯೊಂದಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. 42ನೇ ಎಸಿಎಂಎಂ ಕೋರ್ಟ್​​ನ ನ್ಯಾಯಧೀಶ ಪ್ರಿತ್.ಜೆಯವರು ಇಂದು ರೇವಣ್ಣಗೆ ಜಾಮೀನು ಮಂಜೂರು ಮಾಡಿದ್ದಾರೆ..

ಮನೆ ಕೆಲಸದ ಮಹಿಳೆಗೆ ರೇವಣ್ಣ ಲೈಂಗಿಕ ಕಿರುಕುಳ ನೀಡಿದ್ದ ಕೇಸ್​ ಸಂಬಂಧ ರೇವಣ್ಣ CRPC 436 ಅಡಿ ಜಾಮೀನು ಅರ್ಜಿ ಸಲ್ಲಿಸಿ ಷರತ್ತು ಬದ್ಧ ಮಧ್ಯಂತರ ಜಾಮೀನು ಪಡೆದಿದ್ದರು. ಆದರೆ ಅದು ಮಾನ್ಯ ಅಲ್ಲ ಅಂತ ಎಸ್​ಐಟಿ ತಕರಾರು ಸಲ್ಲಿಸಿರೋ ಎಸ್​ಐಟಿ, ಜಾಮೀನು ಕೊಡಬಾರದು ಅಂತ ಹೇಳಿತ್ತು. ಬೇಲಬಲ್ ಸೆಕ್ಷನ್ಸ್ ಇದ್ದ ಕಾರಣ ರೇವಣ್ಣ ಕೋರ್ಟ್​ಗೆ ಶರಣಾಗಿ ಜಾಮೀನು ಕೋರಿದ್ದರು. ಹೀಗಾಗಿ ನ್ಯಾಯಾಲಯವು ಅಂದು ರೇವಣ್ಣಗೆ ಷರತ್ತು ಬದ್ಧ ಮಧ್ಯಂತರ ಜಾಮೀನು ನೀಡಿತ್ತು. ಆದ್ರೆ ಇದಕ್ಕೆ ತಕರಾರು ಸಲ್ಲಿಸಿರೋ ಎಸ್ಐಟಿ ಪ್ರಕರಣದಲ್ಲಿ 376 ಸೇರಿಸಲಾಗಿದೆ. ಅರ್ಜಿಗೆ ಮಾನ್ಯತೆ ಇಲ್ಲವೆಂದು ವಾದ ಮಾಡಿತ್ತು. ಎರಡು ಕಡೆ ವಾದ ಆಲಿಸಿದ ಕೋರ್ಟ್ ಇವತ್ತು ತೀರ್ಪು ನೀಡಿದೆ..

ಜಾಮೀನು ಮಂಜೂರು ವೇಳೆ ಎಸ್ಐಟಿ ತಮ್ಮ ವಾದ ಕೇಳಲು ಮನವಿ ಮಾಡಿಕೊಂಡಿತು. ಆದರೆ ಕೋರ್ಟ್ ಎಸ್ಐಟಿ ಮನವಿಯನ್ನು ತಿರಸ್ಕರಿಸಿತು. ಈಗಾಗಲೇ 436 ಅರ್ಜಿ ಮಾನ್ಯ ಆಗಿದೆ. ಅಲ್ಲದೇ ಬೆಲಬಲ್ ಸೆಕ್ಷನ್ ಇರುವ ಹಿನ್ನೆಲೆ ಆದೇಶಿಸಿದ್ದೇನೆ ಎಂದು ನ್ಯಾಯಾಧೀಶರು ತಿಳಿಸಿದರು. ಇದೇ ವೇಳೆ ಶ್ಯೂರಿಟಿ ಪ್ರೊಸಿಜರ್ ಮುಗಿಸಲು ಕೋರ್ಟ್ ಸೂಚನೆ ನೀಡಿತು.