Belagavi News In Kannada | News Belgaum

ಕೇಂದ್ರ ಕಾರಾಗೃಹದಲ್ಲಿ ‘ವಿಶ್ವ ತಂಬಾಕು ರಹಿತ ದಿನ’ನಿಮಿತ್ಯ ಕಾರ್ಯಕ್ರಮ

ಕೇಂದ್ರ ಕಾರಾಗೃಹದಲ್ಲಿ ‘ವಿಶ್ವ ತಂಬಾಕು ರಹಿತ ದಿನ’ನಿಮಿತ್ಯ ಕಾರ್ಯಕ್ರಮ ಆಯೋಜನೆ.
ದಿನಾಂಕ 02/06/2024 ರಂದು ಕೇಂದ್ರ ಕಾರಾಗೃಹ ಬೆಳಗಾವಿಯಲ್ಲಿ “ ವಿಶ್ವ ತಂಬಾಕು ರಹಿತ ದಿನಾಚರಣೆ” ನಿಮಿತ್ತ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸದರಿ ಕಾರ್ಯಕ್ರಮ ಕೆಎಲ್‍ಇ ಸಂಸ್ಥೆಯ ನರ್ಸಿಂಗ್ ಕಾಲೇಜ ಬೆಳಗಾವಿ ಇವರ ಸಹಯೋಗದಲ್ಲಿ ಆಯೊಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಪ್ರಾಂಶುಪಾಲರಾದ ಶ್ರೀ ವಿರೇಶಕುಮಾರ ನಂದಗಾವಿ, ಡೀನ್ ಶ್ರೀಮತಿ ಪ್ರೀತಿ ಭೂಪಾಲಿ, ಡಾ. ಮಹಾಲಿಂಗ ಆಗಮಿಸಿದ್ದರು. ಅದ್ಯಕ್ಷತೆಯನ್ನು ಕಾರಾಗೃಹ ಸಹಾಯಕ ಅಧಿಕ್ಷಕರಾದ ಶ್ರೀ ವಿ. ಕೃಷ್ಣ ಮೂರ್ತಿ ವಹಿಸಿದ್ದರು. ಆಡಳಿತಾದೀಕಾರಿ ಶ್ರೀ ಬಿ. ಎಸ್. ಪೂಜಾರಿ ಹಾಗೂ ಶ್ರೀ ಮಲ್ಲಿಕಾರ್ಜುನ ಕೊನ್ನೂರ ಉಪಸ್ಥಿತರಿದ್ದರು..

ಕಾರ್ಯಕ್ರಮ ಉದ್ದೇಶಿಸಿ ಶ್ರೀ ಕೃಷ್ಣ ಮೂರ್ತಿ ಮಾತನಾಡಿ, “ಆರೋಗ್ಯವೇ ಭಾಗ್ಯ” ಎಂಬ ನಾಣ್ಣುಡಿಯಂತೆ ನಾವು ಯಾವುದೇ ದುಷ್ಚಟಗಳಿಗೆ ಬಲಿಯಾಗಬಾರದು ತಂಬಾಕು ಸೇವನೆಯಿಂದ ಜಗತ್ತಿನಲ್ಲಿ ಅನೇಕ ಜನ ತಮ್ಮ ಅಮೂಲ್ಯವಾದ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ. ಕಾರಣ ತಾವೆಲ್ಲಾ ಇಂತಹ ದುಶ್ಚಟಗಳಿಂದ ದೂರವಿರಬೇಕು ಕಾರ್ಯಕ್ರಮದ ಸದುಪಯೋಗ ಪಡೆದು ಬಿಡುದಡೆ ನಂತರ ತಮ್ಮ ಕುಟುಂಬಕ್ಕೆ ಸದಸ್ಯಸರಿಗೆ ಹಾಗೂ ಇತರರಿಗೆ ತಂಬಾಕು ಸೇವನೇಯ ದುಷ್ಪರಿಣಾಮಗ ಬಗ್ಗೆ ಅರಿವು ಮುಡಿಸಬೇಕು ಎಂದು ಕಿವಿಮಾತು ಹೇಳಿದರು..

ಕೆಎಲ್‍ಇ ಸಂಸ್ಥೆಯು ಕಾರಾಗೃಹ ಬಂದಿಗಳಿಗಾಗಿ ಕಳೆದ 10 ವರ್ಷಗಳಿಂದ ವಿವಿಧ ತರಬೇತಿ ಆರೋಗ್ಯ ಕಾರ್ಯಕ್ರಮ ಉಚಿತ ಲಸಿಕಾ ಕಾರ್ಯಗಳನ್ನು ನೀಡುತ್ತಿರುವುದು ಸ್ತುತ್ಯಾರ್ಹ ಎಂದು ಹೇಳಿದರು. ಬಂದಿಗಳ ಮನ:ಪರಿವರ್ತನೆಗಾಗಿ ಕಾರಾಗೃಹ ಇಲಾಖೆಯೊಂದಿಗೆ ಕೈ ಜೋಡಿಸಿ ಸಹಕಾರ ನೀಡಿತ್ತಿರುವ ಕೆಎಲ್‍ಇ ಸಂಸ್ಥೆಗೆ ಇಲಾಖೆ ಚಿರಋಣ ಯಾಗಿರುತ್ತದೆ ಎಂದು ಹೇಳಿದರು.

ಹಾಗೂ ಯಾವುದೇ ಫಲಾಪೆಕ್ಷೆ ಬಯಸದೇ ಮಾಡುವ ಸೇವೆ ಉತ್ತಮ ಸಮಾಜಸೇವೆ ಎಂದು ಹೇಳಿದರು.
ಪ್ರಾಂಶುಪಾಲರಾದ ಶ್ರೀ ವಿರೇಶಕುಮಾರ ಎನ್ ಮಾತನಾಡಿ ಕಾರಾಗೃಹ ಹಾಗೂ ಬಂದಿಗಳು ಇವರು ಸಮಾಜದ ಒಂದು ಅಂಗ. ತಾವೆಲ್ಲಾ ತಮ್ಮ ಜೀವನದಲ್ಲಿ ಜರುಗಿದ ಆಕಸ್ಮಿಕ ಘಟನೆಯಿಂದಾಗಿ ತಾವು ಇಲ್ಲಿಗೆ ಬಂದಿರುವುದು ಆದರೆ ತಾವು ಇಲ್ಲಿಂದ ಬಿಡುಗಡೆಯಾಗಿ ಹೋಗಲೆಬೇಕು..

ಕಾರಣ ತಾವೆಲ್ಲಾ ಬಿಡಿಗಡೆ ನಂತರ ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮಾಡದೇ ಉತ್ತಮ ಪ್ರಜೆಗಳಾಗಿ ಬಾಳಿರಿ ಎಂದು ಹೇಳಿದರು ಹಾಗೂ ತಂಬಾಕು ಸೇವನೆಯ ದುಷ್ಪಪರಿಣಾಮಗಳು ಮತ್ತು ಚಿಕಿತ್ಸಾ ಕ್ರಮದ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಿದರು. ಹಾಗೂ ಮುಂದಿನ ದಿನಗಳಲ್ಲಿ ಕಾರಾಗೃಹ ಇಲಾಖೆ ಸಹಕಾರ ನೀಡಲಾಗುವುದು ಎಂದು ಹೇಳಿದರು..

ಕಾರ್ಯಕ್ರಮದಲ್ಲಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ವಿಶ್ವ ತಂಬಾಕು ರಹಿತ ದಿನ ನಿಮಿತ್ಯ “ರೂಪಕ” ಪ್ರದರ್ಶನವಾಯಿತು.
ವೇದಿಕೆಯಲ್ಲಿ ಜೈಲಿನ ವೈದ್ಯಾಧಿಕಾರಿ ಪಾಂಡುರಂಗ ಪೂಜಾರಿ ಜೈಲರ್‍ಗಳಾದ ಶ್ರೀ ರಮೇಶ, ಶ್ರೀ ಬಸವರಾಜ, ಶ್ರೀ ದಂಡೈನವರ ಉಪಸ್ಥಿತರಿದ್ದರು..

ಶ್ರೀ ಸಂಗನಗೌಡರ ವಂದಿಸಿದರು ಶ್ರೀ ಶಶಿಕಾಂತ ಯಾದಗುಡೆ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.