Belagavi News In Kannada | News Belgaum

ಹುಕ್ಕೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ

ಹುಕ್ಕೇರಿ: ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರೀಯಾಂಕಾ ಜಾರಕಿಹೊಳಿ ಐತಿಹಾಸಿಕ ದಿಗ್ವಿಜಯ ಸಾಧಿಸುತ್ತಿದ್ದಂತೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು, ಜಾರಕಿಹೊಳಿ ಅಭಿಮಾನಿಗಳು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.
ಅತ್ತ ಚಿಕ್ಕೋಡಿ ಲೋಕಸಮರದ ಫಲಿತಾಂಶ ಹೊರಬೀಳುತ್ತಿದ್ದಂತೆ ಇತ್ತ ಧಾರಾಕಾರ ಮಳೆ ಸುರಿಯತೊಡಗಿತು. ಈ ವೇಳೆ ಪಟ್ಟಣದ ಪ್ರಮುಖ ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಜಾರಕಿಹೊಳಿ ಅಭಿಮಾನಿಗಳು ಜಮಾಯಿಸಿದರು..

ಈ ವೇಳೆ ಸುರಿಯುತ್ತಿರುವ ಮಳೆಯನ್ನೂ ಲೆಕ್ಕಸದೇ ಅಪಾರ ಸಂಖ್ಯೆಯಲ್ಲಿ ಸೇರಿದ ಜನರು ಗುಲಾಲ ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿ ಹರ್ಷೋದ್ಘಾರ ವ್ಯಕ್ತಪಡಿಸಿದರು.
ಪಟ್ಟಣದ ಕೋರ್ಟ್ ಸರ್ಕಲ್, ಹೊಸ ಬಸ್ ನಿಲ್ದಾಣ, ಹಳೆ ಬಸ್ ನಿಲ್ದಾಣ, ಹಳ್ಳದಕೇರಿ, ಅಂಬೇಡ್ಕರ ನಗರ, ಪೇಟೆ ಮಾರ್ಗ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಬೈಕ್ ಮೆರವಣಿಗೆ ನಡೆಸಿ ಕಾಂಗ್ರೆಸ್ ಮತ್ತು ಜಾರಕಿಹೊಳಿ ಪರ ಘೋಷಣೆ ಕೂಗಿ ಕುಣಿದು ಕುಪ್ಪಳಿಸಿ ಕೇಕೆ ಹಾಕಿದರು..

ಮುಖಂಡರಾದ ರವಿ ಕರಾಳೆ, ಮೌನೇಶ ಪೋತದಾರ, ಮಲ್ಲಿಕಾರ್ಜುನ ರಾಶಿಂಗೆ, ಇಫ್ತಿಕಾರ ಫೀರಜಾದೆ, ಮಹಾದೇವ ತಳವಾರ, ರಾಜು ಕುರಂದವಾಡೆ, ಚಂದು ಗಂಗಣ್ಣವರ, ತಮ್ಮಣಗೌಡ ಪಾಟೀಲ, ಆನಂದ ಝಿರ್ಲಿ, ಪ್ರಕಾಶ ಪಟ್ಟಣಶೆಟ್ಟಿ, ಸಲೀಮ್ ಕಳಾವಂತ, ಇರ್ಷಾದ ಮೊಖಾಶಿ, ಸತೀಶ ದಿನ್ನಿಮನಿ, ರವೀಂದ್ರ ಸನದಿ, ಶಂಕರ ಕಟ್ಟಿಮನಿ, ವಿದ್ಯಾದರ ರಾಣವ್ವಗೋಳ, ಗುರುರಾಜ ಹುಕ್ಕೇರಿ, ಮಿಂಟು ಬಾದುಲೆ, ಅರುಣ ಬೆಳವಿ, ಸುನೀಲ ಕರೋಶಿ, ವಿಲ್ಸನ್ ಕೌಜಲಗಿ, ಸಂತೋಷ ಮಾಳಗೆ, ಇಮ್ರಾನ್ ಮೊಖಾಶಿ, ತೌಸಿಫ್ ಕಳಾವಂತ ಮತ್ತಿತರರು ಉಪಸ್ಥಿತರಿದ್ದರು.