Belagavi News In Kannada | News Belgaum

ಸಚಿವೆ ಹೆಬ್ಬಾಳ್ಕರ್ ತವರು ಕ್ಷೇತ್ರದಲ್ಲೇ ಬಿಜೆಪಿಗೆ ಹೆಚ್ಚು ಮತ

ಬೆಳಗಾವಿ: ವಲಸಿಗ ಎಂಬ ಹಣೆಪಟ್ಟಿಯ ನಡುವೆಯೂ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭರ್ಜರಿ ಗೆಲುವು ಸಾಧಿಸಿದ್ದು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ತೀವ್ರ ಮುಖಭಂಗವಾಗಿದೆ.
8 ಲೋಕಸಭಾ ಮತಕ್ಷೇತ್ರ ಹೊಂದಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದ ಪೈಕಿ ಗ್ರಾಮೀಣ ಕ್ಷೇತ್ರ ಪ್ರತಿನಿಧಿಸುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತವರು ಕ್ಷೇತ್ರದಲ್ಲೇ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಅತಿಹೆಚ್ಚು ಮತಗಳನ್ನ ಪಡೆದುಕೊಂಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಸದ್ಯ 113495 ಮತ ಇದ್ದು ಕಾಂಗ್ರೆಸ್ ಮೃಣಾಲ್‌ ಹೆಬ್ಬಾಳ್ಕರ್ ಗೆ 67403ಮತಗಳು ಬಂದಿವೆ. ಈ ಮತಗಳ ಪೈಕಿ 46,092 ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚು ಲೀಡ್‌ ಬಂದಿದ್ದು ಹೆಬ್ಬಾಳ್ಕರ್ ಗೆ ಕ್ಷೇತ್ರದಲ್ಲೇ ಮತದಾರರು ಕೈಕೊಟ್ಟಿದ್ದಾರೆ.

ಬಿಜೆಪಿಗೆ ಎಷ್ಟು ಲೀಡ್ ಎಲ್ಲಲ್ಲಿ ಇಲ್ಲಿದೆ ವಿವಿರ:

ರಾಮದುರ್ಗ- 402 ಕಾಂಗ್ರೆಸ್ ಲೀಡ್
ಸವದತ್ತಿ- 16951 ಕಾಂಗ್ರೆಸ್ ಲೀಡ್
ಬೈಲಗೊಂಗಲ- 21397 ಬಿಜೆಪಿ ಲೀಡ್
ಗೋಕಾಕ್ – 23897 ಬಿಜೆಪಿ ಲೀಡ್
ಬೆಳಗಾವಿ ದಕ್ಷಿಣ– 73220 ಬಿಜೆಪಿ ಲೀಡ್
ಬೆಳಗಾವಿ ಗ್ರಾಮೀಣ- 47017 ಬಿಜೆಪಿ ಲೀಡ್
ಬೆಳಗಾವಿ-ಉತ್ತರ- 2401ಬಿಜೆಪಿ ಲೀಡ್
ಅರಭಾಂವಿ – 16006 ಬಿಜೆಪಿ ಲೀಡ್