Belagavi News In Kannada | News Belgaum

ದರ್ಶನಾಪುರ ವರ್ಚಸ್ಸು ದ್ವಿಗುಣ; ಕಾರ್ಯಕರ್ತರಲ್ಲಿ ಸಂಭ್ರಮ

ಕೆಂಭಾವಿ ಏಪ್ರಿಲ್ 26 ರಂದು ನಡೆದ 2024 ಲೋಕಸಭೆ  ಚುನಾವಣೆಯಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಜಿ ಕುಮಾರ ನಾಯಕ, ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕರನ್ನು ಹಿಂದಿಕ್ಕಿ ಹಾಗೂ ಸುರಪುರ ವಿಧಾನ ಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ, ಮಾಜಿ ಮಂತ್ರಿ ನರಸಿಂಹನಾಯಕ (ರಾಜುಗೌಡ) ರನ್ನು ಸೋಲಿಸಿ ಭರ್ಜರಿ ಜಯ ಸಾಧಿಸಿದ ಹಿನ್ನಲೆಯಲ್ಲಿ ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸುವುದರ ಮೂಲಕ ಪರಸ್ಪರ ಗುಲಾಲು ಎರಚಿ, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ದರ್ಶನಾಪುರ ವರ್ಚಸ್ಸು:

ಸುರಪುರ ವಿಧಾನ ಸಭೆ ಉಪಚುನಾವಣೆ ಹಾಗೂ ರಾಯಚೂರು ಲೋಕಸಭೆ ಚುನಾವಣೆ ಉಸ್ತುವಾರಿ ವಹಿಸಿಕೊಂಡಿದ್ದ ಸಚಿವ ಶರಣಬಸಪ್ಪಗೌಡ ದರ್ಶನಾಪುರವರು ಶತಾಯ ಗತಾಯ ಮಾಡಿ ಗೆಲ್ಲವು ಸಾಧಿಸಲೇ ಬೇಕಿತ್ತು. ಗೆಲುವು ಸಾಧಿಸದಿದ್ದರೆ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಹೇಳಿದ್ದ ದರ್ಶನಾಪುರವರಿಗೆ ಈ ಎರಡು ಚುನಾವಣಾ ಫಲಿತಾಂಶಗಳು ಆನೆ ಬಲ ತಂದು ಕೊಟ್ಟಿದ್ದು. ಇದು ಕಾಂಗ್ರೆಸ್ ಹೈಕಮಾಂಡ್ ದಲ್ಲಿ ಅವರ ವರ್ಚಸ್ಸು ಮತ್ತಷ್ಟು ಗಟ್ಟಿಗೊಸಿದಂತಾಯಿತು.

 

ಕಮರಿದ ಕಮಲ:

ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರ್ಗಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಐದು ಲೋಕಸಭಾ ಕ್ಷೇತ್ರಗಳಲ್ಲಿ 2019 ರಲ್ಲಿ ಕಮಲ ಅರಳಿತ್ತು. ಈ ಬಾರಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿ ಗೆದ್ದು ಬೀಗಿದೆ. ಈ ಮೂಲಕ ಎಐಸಿಸಿ ಅಧ್ಯಕ್ಷ ಡಾ ಮಲ್ಲಿಕಾರ್ಜುನ ಖರ್ಗೆಯವರ ಕೈ ಬಲಪಡಿಸಿದಂತಾಗಿ,  ಮೋದಿ ಅಲೆಗೆ ಮತದಾರ ಪ್ರಭುಗಳು ಬ್ರೇಕ್ ಹಾಕಿದ್ದು, ಕೈ ಕಮಾಲ್ ದಿಂದ ಕಲ್ಯಾಣ ಕರ್ನಾಟಕದಲ್ಲಿ ಕಮಲ ಕಮರಿದಂತಾಯಿತು.