Belagavi News In Kannada | News Belgaum

ಮನುಗೆ ಕನ್ನಡ ಮಾಣಿಕ್ಯ  

ಕೆಂಭಾವಿ: ಪಟ್ಟಣ ನಿವಾಸಿ ಯುವ ಕಲಾವಿದ ರಾಕ್ಸ ಮನು ಇವರಿಗೆ ಹೈಬ್ರಿಡ್ ನ್ಯೂಸ್ ಸುದ್ದಿ ವಾಹಿನಿಯು  ಕೊಡಮಾಡುವ ಕರುನಾಡ ಸಾಧಕ 2024 ನೇ ಸಾಲಿನ “ಕನ್ನಡ ಮಾಣಿಕ್ಯ” ಪ್ರಶಸ್ತಿ  ನೀಡಲಾಯಿತು. ಜೂ.1 ರಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ಕಲಾವಿದ ಮನುರವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಡಾ.ಮಹೇಶ್ವರ ಮಹಾಸ್ವಾಮಿಗಳು ಅಜಾತ ಶಂಭುಲಿಂಗ ಶಿವಾಚಾರ್ಯರು, ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳು, ಸಂಗಮೇಶ ಉಪಾಸೆ, ಯತೀಶ ಕುಮಾರ, ಸಂಸ್ಥಾಪಕ ಬಿ.ಎನ್. ಹೊರಪೇಟಿ, ರಾಜು ಎಮ್ಮಿಗನೂರ ಸೇರಿದಂತೆ ಇತರರು ಇದ್ದರು.