Belagavi News In Kannada | News Belgaum

ಪೀಠಾಪುರಂನಿಂದ ಗೆದ್ದು ದಾಖಲೆ ಸೃಷ್ಟಿಸಿದ ನಟ ಪವನ್​​ ಕಲ್ಯಾಣ್​​ ..!

ಅಮರಾವತಿ: ಜನಸೇನಾ ಪಕ್ಷದ ಅಧ್ಯಕ್ಷ ಸೂಪರ್​ ಸ್ಟಾರ್​ ಪವನ್​ ಕಲ್ಯಾಣ್​ ಅವರು ಆಂಧ್ರಪ್ರದೇಶದ ಪೀಠಾಪುರಂ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ..

ಸಿಎಂ ಜಗನ್​ ನೇತೃತ್ವದ ವೈಎಸ್​ಆರ್​​ ಕಾಂಗ್ರೆಸ್​ ಅಭ್ಯರ್ಥಿ ವಂಗಾ ಗೀತಾ ವಿಶ್ವನಾಥ್​​ ವಿರುದ್ಧ ಬರೋಬ್ಬರಿ 70 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ..

ನಟ ಪವನ್​ ಕಲ್ಯಾಣ್​ ಅವರಿಗೆ ಬರೋಬ್ಬರಿ 130259 ಮತಗಳು ಲಭಿಸಿವೆ. ವಂಗಾ ಗೀತಾ ವಿಶ್ವನಾಥ್ ಅವರಿಗೆ ಕೇವಲ 62416 ವೋಟ್​​ ಬಿದ್ದಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಪವನ್​ ಕಲ್ಯಾಣ್​ ಅವರು ಈ ಸಲ ಗೆದ್ದು ದಾಖಲೆ ಸೃಷ್ಟಿಸಿದ್ದಾರೆ..