Belagavi News In Kannada | News Belgaum

ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ, ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಗೆಲುವು

ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ, ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಗೆಲುವು

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ವಿರುದ್ಧ 90 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಹುಕ್ಕೇರಿ ಕ್ಷೇತ್ರದಲ್ಲಿ 7583, ಅಥಣಿ ಕ್ಷೇತ್ರದಲ್ಲಿ 8665 ಮತಗಳ ಮುನ್ನಡೆ ಸಾಧಿಸಿದೆ.
ಕಾಂಗ್ರೆಸ್ ನಿಪ್ಪಾಣಿ ಕ್ಷೇತ್ರದಲ್ಲಿ 29752, ಚಿಕ್ಕೋಡಿಯಲ್ಲಿ 16590, ರಾಯಬಾಗದಲ್ಲಿ 6819, ಯಮಕನಮರಡಿಯಲ್ಲಿ 23587, ಕುಡಚಿಯಲ್ಲಿ 22768, ಕಾಗವಾಡದಲ್ಲಿ 11198 ಮತಗಳ ಮುನ್ನಡೆ ಸಾಧಿಸಿದೆ.
ಆರ್.ಡಿ ಕಾಲೇಜು ಆವರಣದಲ್ಲಿ ಮಂಗಳವಾರ ಬೆಳಿಗ್ಗೆ ಮತಗಳ ಎಣಿಕೆ ನಡೆಯಿತು. 22 ಸುತ್ತುಗಳ ಎಣಿಕೆಯಲ್ಲಿ ಮೊದಲ ಸುತ್ತಿನಲ್ಲಿ 8,533 ಮತಗಳ ಮುನ್ನಡೆ ಸಾಧಿಸಿದ ಪ್ರಿಯಾಂಕಾ, ಎರಡನೇ ಸುತ್ತಿನಲ್ಲಿ 20,314 ಮತಗಳ ಮುನ್ನಡೆ ಕಾಯ್ದುಕೊಂಡರು. 10, 16 ಮತ್ತು 17 ನೇ ಸುತ್ತುಗಳಲ್ಲಿ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮುನ್ನಡೆ ಸಾಧಿಸಿದ್ದು ಬಿಟ್ಟರೆ, ಪ್ರತಿ ಸುತ್ತಿನಲ್ಲೂ ಪ್ರಿಯಾಂಕಾ ತಮ್ಮ ಗೆಲುವಿನ ಅಂತರ
ಹೆಚ್ಚಿಸಿಕೊಳ್ಳುತ್ತಾ ಹೋದರು.
ಪ್ರಿಯಾಂಕಾ ಗೆಲ್ಲುವುದು ಖಚಿತವಾಗುತ್ತಿದ್ದಂತೆ
ಕಾಲೇಜಿನ ಹೊರಗೆ ಜಾರಕಿಹೊಳಿ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ನಡೆಸಿದರು.
ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ 18 ಮಂದಿ
ಕಣದಲ್ಲಿದ್ದರು. ಪ್ರಿಯಾಂಕಾ ಜಾರಕಿಹೊಳಿ
7,13,461 ಮತ ಪಡೆದರೆ, ಅಣ್ಣಾಸಾಹೇಬ ಜೊಲ್ಲೆ
6,22,627 ಮತ ಗಳಿಸಿದರು. ಪಕ್ಷೇತರರಾಗಿ
ಕಣಕ್ಕಿಳಿದಿದ್ದ ಶಂಭು ಕಲ್ಲೋಳಿಕರ 25,466 ಮತ
ಪಡೆದು ಅಚ್ಚರಿ ಮೂಡಿಸಿದ್ದಾರೆ. 2,608 ಮತದಾರರು ‘ನೋಟಾ’ ಚಲಾಯಿಸಿದ್ದಾರೆ.

ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ವಿರುದ್ಧ ದಾಖಲೆಯ ಗೆಲುವು ಸಾಧಿಸಿದ್ದಾರೆ.
ಅವರು ಗಳಿಸಿದ ಮತಗಳ ವಿವಿರ ಹೀಗಿದೆ.
ರಾಮದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ 402 ಮತಗಳ ಮುನ್ನಡೆ ಸಾಧಿಸಿದೆ. ಸವದತ್ತಿ ಕ್ಷೇತ್ರದಲ್ಲಿ 16951 ಕಾಂಗ್ರೆಸ್ ಲೀಡ್ ಸಾಧಿಸಿದೆ. ಉಳಿದಂತೆ ಬಿಜೆಪಿ
ಬೈಲಗೊಂಗಲ ಕ್ಷೇತ್ರದಲ್ಲಿ 21,397
ಗೋಕಾಕ್ ನಲ್ಲಿ 23897, ಬೆಳಗಾವಿ ದಕ್ಷಿಣದಲ್ಲಿ 73220, ಬೆಳಗಾವಿ ಗ್ರಾಮೀಣದಲ್ಲಿ 47017,
ಬೆಳಗಾವಿ ಉತ್ತರದಲ್ಲಿ 2401 ಅರಭಾಂವಿಯಲ್ಲಿ 16006 ಮತಗಳ ಮುನ್ನಡೆ ಸಾಧಿಸಿದೆ.
ವಲಸಿಗ ಎಂಬ ಹಣೆಪಟ್ಟಿಯ ನಡುವೆಯೂ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಗೋಕಾಕ್ ಸಾಹುಕಾರರು ಸೇಡು ತೀರಿಸಿಕೊಂಡಿದ್ದಾರೆ.
8 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಳಗಾವಿ ಗ್ರಾಮೀಣ ಕ್ಷೇತ್ರ ಪ್ರತಿನಿಧಿಸುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತವರು ಕ್ಷೇತ್ರದಲ್ಲೇ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಅತಿಹೆಚ್ಚು ಮತಗಲನ್ನು ಪಡೆದುಕೊಂಡಿದ್ದಾರೆ. ಜಗದೀಶ್ ಶೆಟ್ಟರ್ ಗೆ ಗೆಲುವು ತಂದು ಕೊಡಲು ಜಾರಕಿಹೊಳಿ ಸಹೋದರು ಯಶಸ್ವಿಯಾಗಿದ್ದಾರೆ. ಮೃಣಾಲ್ ಸೋಲಿಸಲು ಸದ್ದಿಲ್ಲದೆ ಯೋಜನೆ ರೂಪಿಸಿದ್ದು ಜಾರಕಿಹೊಳಿ
ಸಹೋದರರು, ಇಡೀ ಕ್ಷೇತ್ರದಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಿದ್ದರು. ಶಾಸಕರಾದ ರಮೇಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರು ಗೋಕಾಕ್, ಅರಭಾವಿಯಲ್ಲಿ ಲೀಡ್ ದೊರಕಿಸಿ ಕೊಟ್ಟಿದ್ದಾರೆ. ಗೋಕಾಕ್ ನಲ್ಲಿ ಬಿಜೆಪಿಗೆ 24 ಸಾವಿರ ಮತಗಳ ಮುನ್ನಡೆ ಹಾಗೂ ಅರಭಾವಿಯಲ್ಲಿ ಬಿಜೆಪಿಗೆ 21 ಸಾವಿರ ಮತಗಳ ಲೀಡ್ ತಂದು ಕೊಡುವ ಮೂಲಕ ಜಾರಕಿಹೊಳಿ ಸಹೋದರರು ಜಿಲ್ಲೆಯಲ್ಲಿ ಮತ್ತೊಮ್ಮೆ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ.

 

ಇನ್ನು ಕರ್ನಾಟಕದಲ್ಲಿ ಯಾರ್ಯಾರ ಗೆಲವು ಎಲ್ಲಿ

 

28 ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದ ಅಭ್ಯರ್ಥಿಗಳ ಮಾಹಿತಿ

1.ಚಿಕ್ಕೋಡಿ ಕಾಂಗ್ರೆಸ್ ಪ್ರಿಯಾಂಕ ಜಾರಕಿಹೊಳಿ ಗೆಲುವು

2.ಬೆಳಗಾವಿ ಬಿಜೆಪಿಯ ಜಗದೀಶ್ ಶೆಟ್ಟರ್ ಗೆಲುವು

3.ಬಾಗಲಕೋಟೆ ಬಿಜೆಪಿಯ ಪಿ.ಸಿ. ಗದ್ದಿಗೌಡರ ಗೆಲುವು

03. ಕೋಲಾರ ಜೆಡಿಎಸ್ ನ ಮಲ್ಲೇಶ್ ಬಾಬು ಗೆಲುವು

04.ವಿಜಯಪುರ ಬಿಜೆಪಿಯ ರಮೇಶ್ ಜಿಗಜಿಣಗಿ ಗೆಲುವು

5.ಕಲಬುರಗಿ ಕಾಂಗ್ರೆಸ್ ನ ಡಾ. ರಾಧಾಕೃಷ್ಣ ದೊಡ್ಡಮನಿ ಗೆಲುವು

6.ರಾಯಚೂರು ಕಾಂಗ್ರೆಸ್ ನ ಕುಮಾರ್ ನಾಯಕ್ ಗೆಲುವು

7.ಬೀದರ್ ಕಾಂಗ್ರೆಸ್ ನ ಸಾಗರ್ ಖಂಡ್ರೆ ಗೆಲುವು

8.ಕೊಪ್ಪಳ ಕಾಂಗ್ರೆಸ್ ನ ರಾಜಶೇಖರ್ ಹಿಟ್ನಾಳ್ ಗೆಲುವು

10.ಬಳ್ಳಾರಿ ಕಾಂಗ್ರೆಸ್ ನ ಇ. ತುಕಾರಾಂ ಗೆಲುವು

11.ಹಾವೇರಿ ಬಿಜೆಪಿಯ ಬಸವರಾಜ ಬೊಮ್ಮಾಯಿ ಗೆಲುವು

12.ಧಾರವಾಡ ಬಿಜೆಪಿಯ ಪ್ರಹ್ಲಾದ್ ಜೋಶಿ ಗೆಲುವು

13.ಉತ್ತರ ಕನ್ನಡ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲುವು

14.ದಾವಣಗೆರೆ ಕಾಂಗ್ರೆಸ್ ನ ಪ್ರಭಾ ಮಲ್ಲಿಕಾರ್ಜುನ್ ಗೆಲುವು

15.ಶಿವಮೊಗ್ಗ ಬಿಜೆಪಿಯ ಬಿ.ವೈ. ರಾಘವೇಂದ್ರ ಗೆಲುವು

16.ಉಡುಪಿ ಚಿಕ್ಕಮಗಳೂರು ಬಿಜೆಪಿಯ ಕೋಟಾ ಶ್ರೀನಿವಾಸ ಪೂಜಾರಿ ಗೆಲುವು

17.ಹಾಸನ ಕಾಂಗ್ರೆಸ್ ಶ್ರೇಯಸ್ ಪಟೇಲ್ ಗೆಲುವು

18.ದಕ್ಷಿಣ ಕನ್ನಡ ಬಿಜೆಪಿ ಬ್ರಿಜೇಶ್ ಚೌಟ ಗೆಲುವು

19.ಚಿತ್ರದುರ್ಗ ಬಿಜೆಪಿಯ ಗೋವಿಂದ ಕಾರಜೋಳ ಗೆಲುವು

20.ತುಮಕೂರು ಬಿಜೆಪಿಯ ವಿ. ಸೋಮಣ್ಣ ಗೆಲುವು

21.ಮಂಡ್ಯ ಜೆಡಿಎಸ್ ಎಚ್. ಡಿ. ಕುಮಾರಸ್ವಾಮಿ ಗೆಲುವು

22.ಮೈಸೂರು- ಕೊಡಗು ಬಿಜೆಪಿಯ ಯದುವೀರ್ ಒಡೆಯರ್ ಗೆಲುವು

23.ಚಾಮರಾಜನಗರ ಕಾಂಗ್ರೆಸ್ ನ ಸುನೀಲ್ ಬೋಸ್ ಗೆಲುವು

24.ಬೆಂಗಳೂರು ಗ್ರಾ. ಬಿಜೆಪಿಯ ಡಾ. ಸಿ.ಎನ್.‌ ಮಂಜುನಾಥ್ ಗೆಲುವು

25.ಬೆಂಗಳೂರು ಉತ್ತರ ಬಿಜೆಪಿಯ ಶೋಭಾ ಕರಂದ್ಲಾಜೆ ಗೆಲುವು

26.ಬೆಂಗಳೂರು ಕೇಂದ್ರ ಬಿಜೆಪಿಯ ಪಿ.ಸಿ. ಮೋಹನ್ ಗೆಲುವು

27.ಬೆಂಗಳೂರು ದಕ್ಷಿಣ ಬಿಜೆಪಿಯ ತೇಜಸ್ವಿ ಸೂರ್ಯ ಗೆಲುವು

28.ಚಿಕ್ಕಬಳ್ಳಾಪುರ ಬಿಜೆಪಿಯ ಕೆ. ಸುಧಾಕರ್ ಗೆಲುವು