Belagavi News In Kannada | News Belgaum

ಲೋಕಸಭಾ ಚುನಾವಣಾ ಪ್ರಕ್ರಿಯೆ: ಪೊಲೀಸ್ ಇಲಾಖೆ ಪಾತ್ರ ಮಹತ್ವದ್ದು

 

ಬೆಳಗಾವಿ: ಜಿಲ್ಲೆಯಲ್ಲಿ 18 ವಿಧಾನ ಸಭಾ ಮತಕ್ಷೇತ್ರಗಳಿವೆ ಅದರಲ್ಲಿ ಕಿತ್ತೂರು ಹಾಗೂ ಖಾನಾಪೂರ ವಿಧಾನಸಭಾ ಮತಕ್ಷೇತ್ರಗಳನ್ನೂ ಹೊರತುಪಡಿಸಿ ಉಳಿತ ಕ್ಷೇತ್ರಗಳು ಚಿಕ್ಕೋಡಿ ಹಾಗೂ ಬೆಳಗಾವಿ ಲೋಕಸಭಾ ಮತಕ್ಷೇತ್ರಗಳಲ್ಲಿವೆ. ಚುನಾವಣೆ ನಡೆಸುವುದು ಅತ್ಯಂತ ಸವಾಲಿನ ಕೆಲಸ. ಈ ಸವಾಲನ್ನು ಪೊಲೀಸ್ ಇಲಾಖೆ ಅತ್ಯಂತ ಯಶಸ್ವಿಯಾಗಿ ನಿರ್ವಹಿಸದೆ.

ಚುನಾವಣಾ ಪ್ರಕ್ರಿಯೆಯಲ್ಲಿ ಸಾಕಷ್ಟು ಇಲಾಖೆಗಳ ಭಾಗಿಯಾದರು ಪೊಲೀಸ್ ಇಲಾಖೆ ಮಾತ್ರ ಪ್ರತಿ ವಿಭಾಗದಲ್ಲಿ ಅತಿ ಮುಖ್ಯವಾಗಿ ಕಾರ್ಯನಿರ್ವಹಿಸುತ್ತದೆ.
ಮತಗಟ್ಟೆ, ಮತ ಎಣಿಕೆ, ಟ್ರಾಫಿಕ್ ಸಿಗ್ನಲ್, ಬಂದೋಬಸ್ತ್, ಬೀಟ್, ಹೀಗೆ ಇಲ್ಲ ವಿಭಾಗದಲ್ಲಿಯೂ ಪೊಲೀಸ್ ಇಲಾಖೆ ಸಾಕಷ್ಟು ಶ್ರಮ ವಹಿಸಿದೆ.

ನಗರ ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮರ್ಬನ್ಯಾಂಗ್, ನಗರ ಪೊಲೀಸ್ ಉಪ ಆಯುಕ್ತ ರೋಹನ್ ಜಗದೀಶ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಸ್ನೇಹ, ನಗರ ಠಾಣಾಧಿಕಾರಿ ಸೇರಿದಂತೆ ಪೊಲೀಸ್ ಇಲಾಖೆಯ ಎಲ್ಲ ಸಿಬ್ಬಂದಿಗಳ ಕರ್ತವ್ಯ ಸಾರ್ವಜನಿಕರ ಮೆಚ್ಚುಗೆ ಪಾತ್ರವಾಗಿದೆ.

ಆಯುಕ್ತ ಇಡಾ ಮಾರ್ಟಿನ್ ಮರ್ಬನ್ಯಾಂಗ್, ನಗರ ಪೊಲೀಸ್ ಉಪ ಆಯುಕ್ತ ರೋಹನ್ ಜಗದೀಶ್ ಅವರ ಅಚ್ಚುಕಟ್ಟು ಕರ್ತವ್ಯ ನಿರ್ವಹಣೆಯಿಂದ
ಚುನಾವಣಾ ಪ್ರಕ್ರಿಯೆಯಂತಹ ದೊಡ್ಡ ಸವಾಲು ಸಮರ್ಪಕವಾಗಿ ನಿರ್ವಹಿಸಿ ಯಶಸ್ವಿದ್ದಾರೆ.

ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದ ಜತೆ ಗಡಿ ಹಂಚಿಕೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಚೆಕ್ ಪೋಸ್ಟ್ ಸ್ಥಾಪನೆ, ಭದ್ರತೆ ನಿಯೋಜನೆ ಕೂಡ ಅಷ್ಟೇ ಸವಾಲಿನ ಕೆಲಸವಾಗಿದ್ದು, ಪೊಲೀಸ್ ಇಲಾಖೆ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಿ ನ್ಯಾಯಸಮ್ಮತ ಹಾಗೂ ಸುಗಮ ಚುನಾವಣೆ ನಡೆಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.