Belagavi News In Kannada | News Belgaum

ರಜೆ ಮುಗಿಸಿ ಮೊದಲ ದಿನ ಕಾಲೇಜಿಗೆ ಹೊರಟಿದ್ದ ಅಕ್ಕ-ತಮ್ಮ ಭೀಕರ ಅಪಘಾತಕ್ಕೆ ಬಲಿಯಾಗಿರುವ ದಾರುಣ ಘಟನೆ

ಬೆಂಗಳೂರು: ರಜೆ ಮುಗಿಸಿ ಮೊದಲ ದಿನ ಕಾಲೇಜಿಗೆ ಹೊರಟಿದ್ದ ಅಕ್ಕ-ತಮ್ಮ ಭೀಕರ ಅಪಘಾತಕ್ಕೆ ಬಲಿಯಾಗಿರುವ ದಾರುಣ ಘಟನೆ ನಗರದಲ್ಲಿ ನಡೆದಿದೆ.

ದೊಡ್ಡನಾಗಮಂಗಲದ ಕೆಂಪೇಗೌಡ ಬಡಾವಣೆಯ ಮಧುಮಿತ (20), ರಂಜನ್‌ (18) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್‌ ಠಾಣೆ ವ್ಯಾಪ್ತಿಯ ದೊಡ್ಡ ನಾಗಮಂಗಲದಲ್ಲಿ ಈ ಘಟನೆ ನಡೆದಿದೆ.

ಮಧುಮಿತ ರಜೆ ಮುಗಿಸಿ ಮೊದಲ ದಿನ ಕಾಲೇಜು ಪ್ರಾರಂಭ ಎಂದು ತಮ್ಮನ ಜೊತೆ ಕಾಲೇಜಿಗೆ ಹೊರಟಿದ್ದಳು. ಬೈಕ್‌ನಲ್ಲಿ ಹೋಗುತ್ತಿದ್ದಾಗ ನೀರಿನ ಟ್ಯಾಂಕರ್ ಚಾಲಕ ಏಕಾಏಕಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮವಾಗಿ ಅಕ್ಕ-ತಮ್ಮ ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಸಹೋದರಿ ಮಧುಮಿತಳನ್ನು ಕಾಲೇಜಿಗೆ ಬಿಟ್ಟುಬರಲು ರಂಜನ್‌ ಬೈಕ್‌ನಲ್ಲಿ ಹೊರಟಿದ್ದ. ಅತಿ ವೇಗವಾಗಿ ಬಂದ ನೀರಿನ ಟ್ಯಾಂಕರ್‌ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಆಗ ಕೆಳಗೆ ಬಿದ್ದ ಅಕ್ಕ-ತಮ್ಮನ ಮೇಲೆ ವಾಟರ್‌ ಟ್ಯಾಂಕರ್‌ನ ಹಿಂಬದಿಯ ಚಕ್ರ ಹರಿದಿದೆ.

ವಾಟರ್ ಟ್ಯಾಂಕರ್ ಬೈಕ್‌ಗೆ ಡಿಕ್ಕಿ ಹೊಡೆಯುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಾಟರ್ ಟ್ಯಾಂಕರ್ ಚಾಲಕನ ಮೇಲೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಅಪಘಾತ ಮಾಡಿ ಪರಾರಿಯಾಗಿರುವ ವಾಟರ್ ಟ್ಯಾಂಕರ್ ಚಾಲಕನ ಬಂಧನಕ್ಕೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು