Belagavi News In Kannada | News Belgaum

ಅಪಾರ್ಟ್ಮೆಂಟ್ ನಲ್ಲಿ ಬಾಲಿವುಡ್‌ ಯುವ ನಟಿ ಆತ್ಮಹತ್ಯೆ..!

ಮುಂಬೈ: ಯುವನಟಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಮುಂಬೈನ ಲೋಖಂಡವಾಲಾದಲ್ಲಿ ನಡೆದಿರುವುದು ವರಿದಯಾಗಿದೆ.

ನೂರ್ ಮಾಲಾಬಿಕಾ ದಾಸ್(31) ನೇಣು ಬಿಗಿದುಕೊಂಡು ಮೃತಪಟ್ಟ ನಟಿ. ಜೂ.6 ರಂದು ಲೋಖಂಡವಾಲಾದಲ್ಲಿರುವ ತನ್ನ ಅಪಾರ್ಟ್‌ ಮೆಂಟ್‌ ನಲ್ಲಿ ನೂರು ಫ್ಯಾನ್‌ ಗೆ ನೇಣು ಬಿಗಿದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಫ್ಲಾಟ್‌ನಿಂದ ದುರ್ವಾಸನೆ ಬರುತ್ತಿದೆ ಎಂದು ನಟಿಯ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಓಶಿವಾರ ಪೊಲೀಸರು ಆಕೆಯ ಕೊಠಡಿಯ ಬಾಗಿಲು ಮುರಿದು ನೋಡಿದಾಗ ನೂರ್ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಮೇ ತಿಂಗಳವರೆಗೆ ನಟಿಯ ಜೊತೆ ಕುಟುಂಬಸ್ಥರು ಇದ್ದರು. ಇತ್ತೀಚಿಗಷ್ಟೇ ಕುಟುಂಬಸ್ಥರು ತನ್ನ ಊರು ಅಸ್ಸಾಂಗೆ ವಾಪಾಸ್‌ ಆಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.