Belagavi News In Kannada | News Belgaum

ಮಠದ ಶ್ರೀಗಳ ಹತ್ಯೆ: ಆಪ್ತ ಸಹಾಯಕ ಅರೆಸ್ಟ್

ಮೈಸೂರು:  ಮೈಸೂರಿನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಸ್ವಾಮೀಜಿ ಕೊಲೆ  ಮಾಡಲಾಗಿದೆ. ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಅನ್ನದಾನೇಶ್ವರ ಮಠದ 90 ವರ್ಷದ ಶಿವಾನಂದ ಸ್ವಾಮೀಜಿ ಅವರ ಕೊಲೆ ಆಗಿದೆ.

ಸ್ವಾಮೀಜಿ ಆಪ್ತ ಸಹಾಯಕ ರವಿ(60) ಎಂಬಾತನಿಂದ ಕೃತ್ಯ ನಡೆದಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ನಜರ್‌ಬಾದ್ ಪೊಲೀಸರು   ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಿವಾನಂದ ಸ್ವಾಮೀಜಿಗಳ ಆಪ್ತ ಸಹಾಯಕನಾಗಿದ್ದ ರವಿ ಕುಡಿದ ಮತ್ತಿನಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹುಲ್ಲು ಕತ್ತರಿಸುವ ಆಯುಧದಲ್ಲಿ ಸ್ವಾಮೀಜಿ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಡಿಸಿಪಿ ಮುತ್ತುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.