Belagavi News In Kannada | News Belgaum

ಮೈಸೂರಿನ ಕಾಂಗ್ರೆಸ್‌ ನಾಯಕರಿಂದ ನೂತನ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಸನ್ಮಾನ

ಮೈಸೂರು: ಬುದ್ದ, ಬಸವಣ್ಣ, ಡಾ. ಬಿ. ಆರ್. ಅಂಬೇಡ್ಕರ್ ಅವರ ಆಶಯದಂತೆ ಸರ್ವರ ಅಭಿವೃದ್ಧಿಗೆ ಶ್ರಮಿಸುತ್ತೆನೆಂದು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಹೇಳಿದರು.

ಮೈಸೂರಿನ ಸುಣದಕೇರಿಯ ಶ್ರೀ ಮಲೆ ಮಹದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ನಂತರ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.

ಲೋಕಸಭೆ ಸದಸ್ಯೆಯಾಗಿ ಮೊದಲ ಬಾರಿಗೆ ಮೈಸೂರಿಗೆ ಭೇಟಿ ನೀಡಿದ್ದೇನೆ. ಇಂದು ನಾಯಕ ಸಮಾಜದಿಂದಿ ನನ್ನನ್ನು ಸನ್ಮಾನಿಸಿದ್ದು ಸಂತಸ ತಂದಿದೆ. ತಂದೆ, ಸಚಿವರಾದ ಸತೀಶ್ ಜಾರಕಿಹೊಳಿಗೆ ಅವರ ಮಾರ್ಗದರ್ಶನದಲ್ಲಿ ನಾನು ಕೂಡ ಸಮಾಜದ ಪ್ರಗತಿಗೆ, ಶೈಕ್ಷಣಿಕ ಏಳಿಗೆಗಾಗಿ ಹಗಲಿರುಳು ದುಡಿಯುತ್ತೇನೆಂದು ಭರವಸೆ ನೀಡಿದರು.

ಸತೀಶ್ ಶುಗರ್ಸ್ ನಿರ್ದೇಶಕ, ಯುವ ನಾಯಕ ರಾಹುಲ್ ಜಾರಕಿಹೊಳಿ ಮಾತನಾಡಿ, ನಾಯಕ ಸಮಾಜದ ಬಾಂಧವರು ತಂದೆ ಸತೀಶ್ ಜಾರಕಿಹೊಳಿ ಅವರ ಪರ ಸದಾ ಬೆನ್ನೆಲುಬು ಆಗಿ ನಿಂತಿದ್ದು, ಈಗ ನಿಮ್ಮ ಆಶೀರ್ವಾದ ನಮ್ಮ ಮೇಲೆಯೂ ಇರಲಿ ಎಂದು ಕೋರಿದರು.

ಈ ಸಂದರ್ಭದಲ್ಲಿ ನಾಯಕ ಸಮಾಜ ಸಾವಿರಾರು ಮುಖಂಡರು ಇದ್ದರು.