Belagavi News In Kannada | News Belgaum

ಇಷ್ಟಕ್ಕಿಂತ ಕಷ್ಟವೇ ಇತ್ತು: ಅದಕ್ಕೆ ಡಿವೋರ್ಸ್‌ ಕೊಟ್ಟೆ ಎಂದ ಚಂದನ್!

ಬೆಂಗಳೂರು: ವಿಚ್ಛೇದನದ ಬಳಿಕ ಮೊದಲ ಬಾರಿಗೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಸುದ್ದಿಗೋಷ್ಟಿ ನಡೆಸಿದ್ದು, ಎಲ್ಲಾ ವದಂತಿಗಳಿಗೂ ಉತ್ತರ ನೀಡಿದ್ದಾರೆ. ಕೆಲವು ಊಹಾಪೋಹಗಳಿಗೆ ಉತ್ತರಿಸಿದ ಚಂದನ್ ಶೆಟ್ಟಿ ಅವರು ನಿವೇದಿತಾ ಹಾಗೂ ನಾನು ವಿಚ್ಛೇದನ ಪಡೆದಿದ್ದು ಯಾಕೆ ಅನ್ನೋ ಅಸಲಿ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮೊದಲು ಮಾತನಾಡಿದ ಚಂದನ್ ಅವರು ಡಿವೋರ್ಸ್ ಪಡೆಯಲು ಬೇರೆ ಯಾವುದೇ ಕಾರಣಗಳಿಲ್ಲ. ನಾವು ಮದುವೆಯಾದ 4 ವರ್ಷಗಳಿಂದ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಆಗಲೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಹಲವು ವದಂತಿಗಳಿಗೆ ತೆರೆ ಎಳೆದಿರುವ ಚಂದನ್ ಹಾಗೂ ನಿವೇದಿತಾ ಅವರು ನಮ್ಮ ಮಧ್ಯೆ ದ್ವೇಷ, ವೈಮನಸ್ಸು ಏನೂ ಇಲ್ಲ. ನಾವಿಬ್ಬರು ಖುಷಿಯಾಗಿ ಇರಬೇಕು ಅಂದ್ರೆ ವಿಚ್ಛೇದನ ಬೇಕಿತ್ತು. ಈ ಕಾರಣಕ್ಕೆ ನಾವು ಬೇರೆ, ಬೇರೆ ಆಗಿದ್ದೇವೆ. ಇಬ್ಬರು ಒಮ್ಮತದಿಂದ ದೂರ ಆಗಿದ್ದೀವಿ ಎಂದು ಸುದ್ದಿಗೋಷ್ಟಿಯಲ್ಲಿ ಇಬ್ಬರು ಸ್ಪಷ್ಟಪಡಿಸಿದ್ದಾರೆ.