Belagavi News In Kannada | News Belgaum

ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ: ಯೋಧ ಅರೆಸ್ಟ್..

ಕಾರವಾರ: ಸಂಬಂಧಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಹಲ್ಲೆ ಮಾಡಿದ ಆರೋಪದ ಮೇಲೆ ಸಿಆರ್ಪಿಎಫ್ ಯೋಧರೊಬ್ಬರನ್ನು ಬಂಧಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಕಸ್ತೂರು ಸಮೀಪ ಬಳಿ ನಡೆದಿದೆ..

ಅಣ್ಣಿಗೇರಿಯ ಕೊಟ್ರೇಶ್ ಜಗದೇವಪ್ಪ ಅಕ್ಕಿ ಬಂಧಿತ ಯೋಧ. ಬಟ್ಟೆ ಖರೀದಿಗೆ ಹುಬ್ಬಳ್ಳಿಗೆ ಬಂದಿದ್ದಾಗ ಸುಳ್ಳು ಹೇಳಿ ಮಹಿಳೆಯನ್ನು ಕಾರ್ ನಲ್ಲಿ ಹತ್ತಿಸಿಕೊಂಡು ರಾತ್ರಿಯೆಲ್ಲಾ ಸುತ್ತಾಡಿಸಿ ಬೆಳಗ್ಗೆ ಸಿದ್ದಾಪುರ -ಶಿರಸಿ ರಸ್ತೆಯ ಕಸ್ತೂರು ಸಮೀಪ ಕಾರ್ ನಿಲ್ಲಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾಗಿ ಮಹಿಳೆ ಆರೋಪಿಸಿದ್ದಾರೆ. ಆತನ ವರ್ತನೆಗೆ ವಿರೋಧಿಸಿದಾಗ ಅಲ್ಲಿಯೇ ಬಿದ್ದಿದ್ದ ಬಾಟಲಿಯಿಂದ ತಲೆಗೆ ಹೊಡೆದಿದ್ದು, ಕೈಗೆ ಗಾಯವಾಗಿದೆ..

ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದಾಗ ಕಾರ್ ಹತ್ತಿಸಲು ಮುಂದಾಗಿದ್ದಾನೆ. ತಾನು ಸತ್ತಂತೆ ಮಲಗಿದ್ದರಿಂದ ಅಲ್ಲಿಂದ ಹೊರಟು ಹೋಗಿದ್ದಾನೆ. ಬಳಿಕ ಪೆಟ್ರೋಲ್ ಬಂಕ್ ನವರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿರುವುದಾಗಿ ಮಹಿಳೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂಡಗೋಡ ಸಮೀಪ ಆರೋಪಿಯನ್ನು ಬಂಧಿಸಿದ್ದಾರೆ.