Belagavi News In Kannada | News Belgaum

ದರ್ಶನ್‌ ಫಾರ್ಮ್‌ ಹೌಸ್‌ ಮ್ಯಾನೇಜರ್‌ ವಿಷ ಸೇವಿಸಿ ಆತ್ಮಹತ್ಯೆ

ಬೆಂಗಳೂರು: ಕಾಣೆಯಾಗಿದ್ದ ನಟ ದರ್ಶನ್‌ ಫಾರ್ಮ್‌ ಹೌಸ್‌ ಮ್ಯಾನೇಜರ್‌ ಶ್ರೀಧರ್‌ ಎಂಬಾತನ ಶವ ಪತ್ತೆಯಾಗಿದ್ದು,‌ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.
ನಟ ದರ್ಶನ್‌ ಫಾರ್ಮ್‌ ಹೌಸ್‌ ಮ್ಯಾನೇಜರ್‌ ಶ್ರೀಧರ್‌ (35) ವಿಷ ಸೇವಿಸಿ ಏಪ್ರಿಲ್‌ 17 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಯುವ ಮುನ್ನ ಬರೆದಿಟ್ಟಿರುವ ಡೆತ್‌ ನೋಟ್‌ ಕೂಡ ಪತ್ತೆಯಾಗಿದೆ..

ಕೀಟನಾಶಕ ಸೇವನೆ ಮಾಡಿ ಶ್ರೀಧರ್‌ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ಆತ ಸಾಯುವ ಮುನ್ನ ಬರೆದಿಟ್ಟಿದ್ದು, ಇದೀಗ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಇಂದು ಸ್ಥಳ ಮಹಜರಿಗಾಗಿ ದರ್ಶನ್‌ ಸೇರಿದಂತೆ ಇತರೆ ಆರೋಪಿಗಳನ್ನು ಮೈಸೂರಿಗೆ ಕರೆದುಕೊಂಡು ಹೋಗಲಾಗುತ್ತಿದೆ.