Belagavi News In Kannada | News Belgaum

ಬೆಳಗಾವಿಯಲ್ಲಿ ಬೃಹತ (ಭಾರೀ)ಕೈಗಾರಿಕಾಘಟಕ ಸ್ಥಾಪನೆಗೆ ಅನಿಲ ಬೆನಕೆ ವಿನಂತಿ

ಬೆಂಗಳೂರು,ಕೇಂದ್ರ ಬೃಹತ (ಭಾರೀ) ಕೈಗಾರಿಕಾ ಸಚಿವರಾದ ಮಾನ್ಯಎಚ್. ಡಿ. ಕುಮಾರಸ್ವಾಮಿಅವರನ್ನುರಾಜ್ಯ ಬಿಜೆಪಿ ಉಪಾದ್ಯಕ್ಷ ಹಾಗೂ ಮಾಜಿ ಶಾಸಕ ಅನಿಲ ಬೆನಕೆ ಭೇಟಿ ನೀಡಿ ಶುಭಾಷಯಕೋರಿ, ಬೆಳಗಾವಿಯಲ್ಲಿ ಬೃಹತ (ಭಾರೀ) ಕೈಗಾರಿಕಾಘಟಕ ಸ್ಥಾಪನೆಗೆ ಮನವಿ ಸಲ್ಲಿಸಿದರು.

ಈ ಸಂದರ್ಬದಲ್ಲಿ ಸಚಿವರೊಂದಿಗೆ ಚರ್ಚಿಸಿದ ಅನಿಲ ಬೆನಕೆ, ಭಾರತದಲ್ಲಿ ಕೈಗಾರಿಕಾ ಬೆಳವಣಿಗೆಯಲ್ಲಿ ಬೆಳಗಾವಿ ಯಾವಾಗಲು ಮುಂಚೂಣಿಯಲ್ಲಿದೆ. ಅದರಅಂತರ್ಗತ ಸಾಮಥ್ರ್ಯಗಳೊಂದಿಗೆ ಅದರ ಉದ್ಯಮಶೀಲ ನಾಗರಿಕರೊಂದಿಗೆ, ಬೆಳಗಾವಿಯು ಹೂಡಿಕೆಯ ಅವಕಾಶಗಳಿಗೆ ಸೂಕ್ತವಾದಆಯ್ಕೆಯನ್ನುಒದಗಿಸುತ್ತದೆ.

ಬೆಳಗಾವಿಯು ಹಲವಾರು ಕೈಗಾರಿಕೆಗಳನ್ನು ಹೊಂದಿದೆ ಮುಖ್ಯವಾಗಿ ಹೈಡ್ರಾಲಿಕ್ ಮತ್ತು ಫೌಂಡ್ರಿ ಕೈಗಾರಿಕೆಗಳು ಅತೀ ಹೆಚ್ಚಾಗಿವೆ, ಆಹಾರ ಧಾನ್ಯಗಳು, ಕಬ್ಬು, ಹತ್ತಿ, ತಂಬಾಕು, ಎಣ್ಣೆಬೀಜ ಮತ್ತು ಹಾಲಿನ ಉತ್ಪನ್ನಗಳ ವ್ಯಾಪಾರಕೇಂದ್ರವಾಗಿಕಾರ್ಯನಿರ್ವಹಿಸುತ್ತಿದೆ.

ಮುಖ್ಯವಾಗಿ ಬೆಲೆಬಾಳುವ ಲೋಹಗಳು, ಖನಿಜಗಳು, ಸಿಲಿಕಾನ ಹೆಚ್ಚಿನ ಪ್ರಮಾಣದಲ್ಲಿಕಂಡುಬರುತ್ತವೆ. ಆದ್ದರಿಂದ ಸಿಮೆಂಟ್, ಪಾವರಲೂಮ್ ಮುಂತಾದ ಕಾರ್ಖಾನೆಗಳಿಗೆ ಸೂಕ್ತ ಪ್ರದೇಶ. ಶೈಕ್ಷಣಿಕ  ಕೇಂದ್ರ ಎಂದು ಕೀರ್ತಿ ಪಡೆದ ಬೆಳಗಾವಿ ಹೆಸರಾಂತ ವಿಶ್ವವಿದ್ಯಾಲಯಗಳು, ಇಂಜಿನಿಯರಿಂಗ ಕಾಲೇಜುಗಳು, ತಾಂತ್ರಿಕ ಸಂಸ್ಥೆಗಳು  ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ಹೊಂದಿರುವುದರಿಂದ ಮಾನವ ಸಂಪನ್ಮೂಲ ಸಮಸ್ಯೆಇಲ್ಲ ಮತ್ತು ನಗರದ ಸುತ್ತಮುತ್ತ ಸರ್ಕಾರಿ ಭೂಮಿ  ಇದೆ  ಇದುರೇಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಮತ್ತುರಾಷ್ಟ್ರೀಯ ಹೆದ್ದಾರಿಯ ಹತ್ತಿರದಲ್ಲಿರುವುದರಿಂದ  ಎಲ್ಲರೀತಿಯಅಗತ್ಯ ಪೂರೈಕೆ ಸಾಧ್ಯ. ಮುಖ್ಯವಾಗಿ ಬೆಳಗಾವಿ ಯುವ ಪ್ರತಿಭೆಗಳಿಗೆ ಉದ್ಯೋಗ ಅವಕಾಶ ಸಿಗಲಿದೆ, ಆದ್ದರಿಂದತಾವು ಬೆಳಗಾವಿಯಲ್ಲಿ ಬೃಹತ (ಭಾರೀ) ಕೈಗಾರಿಕಾಘಟಕ ಸ್ಥಾಪನೆಗೆ ಒತ್ತು ನೀಡಿ ಬೆಳಗಾವಿಗೆ ಆಗಮಿಸಿ ಸ್ಥಳ ಪರಿಶೀಲನೆ ಮಾಡಿ ಶೀಘ್ರದಲ್ಲಿ ಅಗತ್ಯಕ್ರಮ ಕೈಗೊಳ್ಳಬೇಕಾಗಿ ವಿನಂತಿಸಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಾನ್ಯಕೇಂದ್ರ ಸಚಿವರು  ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.